ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ತಡೆದು ರೈತರ ಹೋರಾಟ.

ದೇವದುರ್ಗ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರು ಬಳಕೆದಾರರ ಸಂಘ ಜಾಲಹಳ್ಳಿ ವತಿಯಿಂದ ನಾರಯಣಪೂರ ಬಲದಂಡೆ ಕಾಲುವೆಗೆ ಎಪ್ರಿಲ್ 20 ವರೆಗೆ ನೀರು ಹರಿಸಲು ಒತ್ತಾಯಿಸಿ ಅಮರಪುರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ ಮಾಡಲಾಗಿದೆ.
ನಾರಾಯಣಪುರ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ 20 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ಭತ್ತ, ಮೇಣಸಿನಕಾಯಿ, ಶೇಂಗಾ, ಸಜ್ಜೆ, ಇನ್ನಿತರ (ಸ್ಟಾಡಿಂಗ್ ಕ್ರಾಫ್ಟ್) ಬೆಳೆಗಳು ಇವೆ ಈ ಬೆಳೆಗಳು ಕಟಾವಿಗೆ ಬರಲು ಇನ್ನೂ ಒಂದುವರೆ ತಿಂಗಳು ಸಮಯ ಆಗುತ್ತದೆ ಏಪ್ರೀಲ್20 ರವರೆಗೆ ಕಾಲುವೆ ನೀರು ಹರಿಸುವ ಅನಿವಾರ್ಯತೆ ಇರುವುದರಿಂದ ನೀರು ಹರಿಸಬೇಕು.
ಒಂದು ವೇಳೆ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಮಾರ್ಚ 23ಕ್ಕೆ ನೀರು ಸ್ಥಗಿತ ಮಾಡಿದಲ್ಲಿ ಪ್ರಸ್ತುತ ರೈತರು ಬೆಳೆದ ಬೆಳೆಗಳು ಸಾವಿರಾರು ಕೋಟಿಯ ರೂಪಾಯಿ ನಷ್ಟವಾಗಿ ರೈತರು ಸಾಲದ ಸುಳಿಗೆ ಸಿಲುಕುತ್ತಾರೆ.
ನೀರವಾರಿ ವ್ಯಾಪ್ತಿಯಲ್ಲಿರುವ ಸ್ಟಾಡಿಂಗ್ ಕ್ರಾಪ್ಸ್ ಬೆಳೆಗಳನ್ನು ರಕ್ಷಣೆ ಮಾಡುವುದು ಸರ್ಕಾರ ಹಾಗೂ ನೀರಾವರಿ ಇಲಾಖೆಯ ತುರ್ತು ಜವಬ್ದಾರಿಯಾಗಿರುತ್ತದೆ.
ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎರಡನೇ ಬೆಳೆಯೂ ನೀರಿನ ಸಮಸ್ಯೆಯಿಂದ ಕೈ ಕೊಟ್ಟರೆ ರೈತರಿಗೆ ಉಳಿಗಾಲವಿಲ್ಲ ರೈತರ ಬೆಳೆಗಳನ್ನು ರಕ್ಷಿಸಲು ಏಪ್ರಿಲ್ 20ರವರೆಗೆ ಕಾಲುವೆ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಚನ್ನಪ್ಪ ಆನೆಗುಂದಿ, ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಜಿ ವೀರೇಶ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಸವರಾಜ ನರೆಗಲ್, ಕಾರ್ಯದರ್ಶಿ ಸಿದ್ದಪ್ಪ ಗುಮೇದಾರ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತ ಗುರಿಕಾರ,ಮೌನೇಶ್ ದಾಸರ,ಶಬ್ಬೀರ್ ಜಾಲಹಳ್ಳಿ. ಸಂಜೀವ ರೆಡ್ಡಿ, ಚಂದಪ್ಪ ಬುದ್ದಿನಿ. ಮತ್ತು ಸಾವಿರಾರು ರೈತರು ಭಾಗವಹಿಸಿದ್ದರು.