Uncategorized
5 ವರ್ಷಕೊಮ್ಮೆ ಶ್ರೀ ಮರಗಾದೇವಿಯ ಜಾತ್ರಾ ಮಹೋತ್ಸವ,ದೇವಸ್ಥಾನಕ್ಕೆ ಮಾಜಿ ಸಚಿವರ ಭೇಟಿ

ಮಾಂಗನೂರ: ಚಿಕ್ಕೋಡಿ ತಾಲೂಕಿನ ಮಾಂಗನೂರ ಗ್ರಾಮದೇವತೆಯಾದ 5 ವರ್ಷಕೊಮ್ಮೆ ನಡೆಯುವ ಶ್ರೀ ಮರಗಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭೇಟಿ ನೀಡಿ,ಉಡಿ ತುಂಬಿ,ಪೂಜೆ ಸಲ್ಲಿಸಿ,ದೇವಿಯ ದರ್ಶನ ಪಡೆದು ಸರ್ವರಿಗೂ ಒಳಿತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಜಾತ್ರಾ ಕಮೀಟಿ ಅಧ್ಯಕ್ಷರು,ಸದಸ್ಯರು,ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.