ರಾಯಬಾಗ

ಕುಡಚಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬ ಶಾಂತಿ ಸಭೆ.

ಕುಡಚಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ರತನಕುಮಾರ ಜಿರಗ್ಯಾಳ ನೇತೃತ್ವದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಶಾಂತಿ ಪಾಲನಾ ಸಭೆ ನಡೆಯಿತು.

ಸಿಪಿಐ ರತನಕುಮಾರ ಜಿರಗ್ಯಾಳ ಮಾತನಾಡಿ ಭಾರತ ದೇಶದ ಯುವಕರ ಏಕೈಕ ದೊಡ್ಡ ಹಬ್ಬ ಆಗಿರುವುದರಿಂದ ನಾವು ಯಾರಿಗೂ ಕೂಡ ಒತ್ತಾಯದಿಂದ ಬಣ್ಣ ಹಚ್ಚುವುದಾಗಲಿ ವಾಹನಗಳನ್ನು ಓಡಿಸುವುದಾಗಲಿ ಮಾಡದೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಹಬ್ಬವನ್ನು ಸಾಮರಸ್ಯ ಸಂತೋಷದಿಂದ ಆಚರಿಸಬೇಕಾಗಿ ತಿಳಿಸಿದರು.

ಸಭೆಯಲ್ಲಿ ಕುಡಚಿ ಠಾಣೆ ಪಿಎಸ್ಐ ಪ್ರೀತಮ ನಾಯಿಕ ಮಾತನಾಡಿ ಭಾರತ ಒಂದು ಹಬ್ಬಗಳು ದೇಶವಾಗಿದ್ದು, ಹಿಂದೂಗಳ ಕೊನೆಯ ಹಬ್ಬ ಹೋಳಿ ಆಗಿದೆ ಹೊಸ ವರ್ಷ ಯುಗಾದಿಯಿಂದ ಹಬ್ಬಗಳು ಪ್ರಾರಂಭವಾಗುತ್ತವೆ. ಕುಡಚಿ ಠಾಣಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಯಾವುದೇ ಭಾಗದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದಲ್ಲಿ ಅಹಿತಕರ ಘಟನೆಗಳು ಜರುಗಿರುವುದಿಲ್ಲ ಕುಡಚಿ ಒಂದು ಸೌಹಾರ್ದತೆಯ ಹೃದಯ ಭಾಗವಾಗಿದ್ದು, ಯಾರಿಗಾದರೂ ಕೂಡ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚುವುದಾಗಲಿ, ರಾಸಾಯನಿಕ ಬಣ್ಣಗಳನ್ನು ಬಳಸುವುದಾಗಲಿ, ವಾಹನಗಳನ್ನು ತಡೆಯುವುದು, ವಾಹನಗಳನ್ನು ಸೈಲೆನ್ಸರ್ ತೆಗೆದು ವೀಲಿಂಗ್ ಮಾಡುವುದನ್ನು ಮಾಡದೇ ಇನ್ನು ಮುಂದೆಯು ಕೂಡ ಎಲ್ಲರೂ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಒಂದು ಒಳ್ಳೆಯ ಹೆಸರು ಉಳಿಸಿಕೊಳ್ಳಬೇಕು ಎಂದರು. .

ಇದೇ ಸಂದರ್ಭದಲ್ಲಿ ಜಯಕುಮಾರ ಸನದಿ, ಸರ್ಫರಾಜ್ ಕರೀಮಖಾನ, ಶಿವಾನಂದ ಲಖನಗಾವ, ಪ್ರಸಾದ ಶಿಂಗೆ ಬಾಬಾಜಾನ ಬಿಚ್ಚು ಹಾಗೂ ಇತರರು ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಹಿರಿಯರಾದ ಶಾಂತಾರಾಂ ಸಣ್ಣಕ್ಕಿ, ಅಜಿತ್ ಘಾಳಿ, ಚಿದಾನಂದ ಮಿಠಾರೆ, ಆಮದ ಸಂದರವಾಲೆ, ಅಶೋಕ್ ಭಾವಿ, ರಮೇಶ ಸಿಂಗಾಡಿ, ತೋಫಿಕ ಓಮನೆ, ಎ.ಎಸ.ಐ ಸುರೇಶ ಕಲ್ಯಾಣಪುರಕರ, ಅಣ್ಣಪ್ಪ ಮಂಗಸೂಳಿ, ಸೋಮು ಹಳಕಿ, ಬಾನಪ್ಪ ಖೋತ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು. ಪೇದೆ ಸಂಗಮೇಶ ನಾಯಿಕ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button