ವಿರೂಪಾಕ್ಷ ಮಹಾಸ್ವಾಮಿಗಳ ಹುಟ್ಟು ಹಬ್ಬದ ಆಚರಣೆ ಕುರಿತು ಭಕ್ತರಿಂದ ಪೂರ್ವ ಬಾವಿ ಸಭೆ!!

ಘಟಪ್ರಭಾ: ಹೊಸಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳ ಹುಟ್ಟು ಹಬ್ಬದ ಆಚರಣೆ ಕುರಿತು ಪೂರ್ವಭಾವಿ ಸಭೆ ಹೊಸಮಠದ ಸಭಾಂಗಣದಲ್ಲಿ ನಡೆಯಿತು,
ಸಾನಿಧ್ಯವನ್ನು ಪೂಜ್ಯ ಶ್ರೀ ಕಾಡಯ್ಯ ಸ್ವಾಮಿಗಳು ಕಾಡಸಿದ್ದೇಶ್ವರ ಮಠ ಕೊಣ್ಣೂರು ವಹಿಸಿದರು.
ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ಕಾರ್ಯಕ್ರಮ ಕುರಿತು ಮಾರ್ಗದರ್ಶನ ಮಾಡಿ ಆಶೀರ್ವದಿಸಿದರು,
ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ವಿ ಮಾಹಾಜನ್, ಕುಮಾರ್ ಹುಕ್ಕೇರಿ, ಪ್ರವೀಣ್ ಮಟಗಾರ್ ಮಾತನಾಡಿದರು, ಜಿ, ಎಸ್ ಕರ್ಪೂರಮಠ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀಗಳ ಹುಟ್ಟು ಹಬ್ಬವನ್ನು 26 -3 -2025 ರಂದು ಇದ್ದು ಆ ದಿವಸ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಹಿರೇಮಠ, ಕಲ್ಲಯ್ಯ ಕಳ್ಳಿಮಠ, ಆನಂದ್ ಬನ್ನನವರ್, ಕರವೇ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಾಶಿ, ರಮೇಶ್ ಜಿರಲಿ, ನವೀನ್ ತುಕ್ಕಾನಟ್ಟಿ, ಮಂಜುನಾಥ್ ಮಟಗಾರ್, ಶಶಿಧರ್ ಚೌಕಶಿ, ಮಂಜು ಪಾಟೀಲ್ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.ವೇ ಮೂ ಬಸಯ್ಯ ಪೂಜಾರಿ ನಿರೂಪಿಸಿದರು..