ಕಿತ್ತೂರು

ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್ ವಾಪಸ್…!!!! ಕೇವಲ ಮನವಿಗೆ ಸೀಮಿತವಾದ ಪ್ರತಿಭಟನೆ.

ಕಿತ್ತೂರು: ಬಜೆಟನಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಅನುದಾನವನ್ನು ನೀಡದ ಹಿನ್ನೆಲೆ ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್’ನ್ನು ವಾಪಸ್ಸು ಪಡೆಯಲಾಗಿದೆ. ಇಂದು ಕೇವಲ ಪ್ರತಿಭಟನಾ ರ್ಯಾಲಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೆಲವು ಪ್ರಾಧಿಕಾರಗಳಿಗೆ ಅನುದಾನ ನೀಡಿದ ಸರ್ಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನೇ ಕಡೆಗಣಿಸಿದೆ. ಈ ತಾರತಮ್ಯ ಖಂಡಿಸಿ ಮಾರ್ಚ್ 18ರಂದು ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸಂಪೂರ್ಣ ಬಂದ್‌ ಮಾಡಲು, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಂಗಳವಾರ ನಡೆದ ಸಭೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಆದರೇ, ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಸಿಎಂ 40 ಕೋಟಿ ಅನುದಾನ ಬಳಕೆ ಮಾಡಲು ಅನುಮತಿ ನೀಡಿರುವುದಾಗಿ ತಿಳಿಸಿದ ಹಿನ್ನೆಲೆ ಬಂದ್’ನ್ನು ವಾಪಸ್ಸು ಪಡೆಯಲಾಗಿದೆ. ಆದರೇ, ಪ್ರತಿಭಟನಾ ರ್ಯಾಲಿ ಮೂಲಕ ರಾಣಿ ಚನ್ನಮ್ಮನ ವೃತ್ತದ ವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

Leave a Reply

Your email address will not be published. Required fields are marked *

Back to top button