ಬೆಳಗಾವಿ
ಬೆಳಗಾವಿಯಲ್ಲಿ ಎ.ಟಿ.ಎಂ ಕಳ್ಳತನಕ್ಕೆ ವಿಫಲ ಯತ್ನ…!

ಬೆಳಗಾವಿ : ನಗರದ ನರ್ತಕಿ ಚಿತ್ರಮಂದಿರದ ಹತ್ತಿರವಿರುವ ಎ.ಟಿ.ಎಂ. ವೊಂದರಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಎಚ್. ಡಿ. ಎಫ್. ಸಿ ಬ್ಯಾಂಕ್ ಎ.ಟಿ.ಎಂ ಶೇಟರ್ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಪತ್ರಿಕೆ ಹಾಕುವ ಯುವಕರ ವಾಹನದ ಸದ್ದು ಕೇಳಿ ಕಳ್ಳರು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.