Uncategorized
ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಂದ ಭೂಮಿ ನಾಶವಾಗುತ್ತಿದೆ – ನ್ಯಾಯಾಧೀಶ ರೋಟ್ಟೆರ

ಹುಕ್ಕೇರಿ : ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಂದ ಭೂಮಿ ನಾಶವಾಗುತ್ತಿದೆ – ನ್ಯಾಯಾಧೀಶ ರೋಟ್ಟೆರ
ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಂದ ಭೂ ಸಂಪತ್ತು ನಾಶವಾಗುತ್ತಿದೆ ಎಂದು ಹುಕ್ಕೇರಿ ಹಿರಿಯ ಸಿವ್ಹೀಲ್ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಹೇಳಿದರು.
ಹುಕ್ಕೇರಿ ನಗರದಲ್ಲಿ ಕೃಷಿ ಇಲಾಖೆ ಮತ್ತು ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜರುಗಿದ ವಿಶ್ವ ಭೂ ದಿನಾಚಾರಣೆಯನ್ನು ಸಿವ್ಹಿಲ್ ನ್ಯಾಯಾಧೀಶ ಸಿ ಗುರುಪ್ರಸಾದ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಸಹಾಯಕ ಕೃಷಿ ನಿರ್ದೆಶಕ ಆರ್ ಬಿ ನಾಯ್ಕರ ಮಾತನಾಡಿ ಇತ್ತಿಚಿಗೆ ತಾಂತ್ರಿಕತೆ ಮತ್ತು ವೈಜ್ಞಾನಿಕ ಕ್ರಾಂತಿಯಿಂದಾಗಿ ಫಲವತ್ತಾದ ಭೂಮಿಯನ್ನು ಮಲಿನ ಮಾಡುತ್ತಿದ್ದೆವೆ,ಇದರಿಂದ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ನೀಡಲು ಸಾದ್ಯವಾಗುವದಿಲ್ಲಾ ಕಾರಣ ರೈತರು ಭೂಮಿಯನ್ನು ಕಾಪಾಡುವದರ ಜೋತೆಗೆ ನೀರು, ಗಾಳಿ, ಸಸ್ಯ ಸಂಪತ್ತು ನಾಶವಾಗದಂತೆ ಕ್ರಮ ಜರುಗಿಸ ಬೇಕು ಎಂದರು
ವೇದಿಕೆ ಮೇಲೆ ತಹಸಿಲ್ದಾರ ಮಂಜುಳಾ ನಾಯಿಕ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಉಪಾದ್ಯಕ್ಷ ಬಿ ಎಮ್ ಜಿನರಾಳೆ, ಶಿವಾನಂದ ಕಾಮತ, ಸಮೀರ ಲೋಕಾಪುರೆ, ಪುರುಷೋತ್ತಮ, ಎ ಬಿ ಕುಲಕರ್ಣಿ, ಎಸ್ ಜೆ ನದಾಫ್ ,ಎ ಸಿ ಕರೋಶಿ ಉಪಸ್ಥಿತರಿದ್ದರು.
ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಮಾತನಾಡಿ ನಮ್ಮ ಸರ್ಕಾರದ ಹಲವಾರು ಅವೈಜ್ಞಾನಿಕ ಯೋಜನೆಗಳಿಂದ ಪರಿಸರದ ಜೋತೆಗೆ ವಾಯು ಮಾಲಿನ್ಯಗಳಿಂದ ದುಷ್ಪರಿಣಾಮಗಳು ಜರಗುತ್ತಿವೆ, ನೂತನ ರಸ್ತೆ ನಿರ್ಮಾಣ ಮಾಡುವಾಗ ಒಂದು ಗಿಡ ಕಡಿದರೆ ಮತ್ತೊಂದು ಸ್ಥಳದಲ್ಲಿ ಹತ್ತು ಸಸಿ ನೆಡುವ ಕಾರ್ಯವಾಗ ಬೇಕು ಎಂದರು
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಹಾಗೂ ತಾಊಕಿನ ವಿವಿಧ ಇಲಾಖೆ ಅಧಿಕಾರಿಗಳು ರೈತರು ಉಪಸ್ಥಿತರಿದ್ದರು.