ಬಾಗಲಕೋಟೆ
ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು..!

ಬಾಗಲಕೋಟೆ : ಇಲ್ಲಿನ ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯದ ನಿಮಿತ್ತ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿದ್ದಾರೆ. ಸೋಮಶೇಖರ ಬೊಮ್ಮಣ್ಣ ದೇವರಮನಿ (15), ಮಲ್ಲಪ್ಪ ಬಸಪ್ಪ ಬಗಲಿ (15) ಹಾಗೂ ಪರನಗೌಡ ಮಲ್ಲಪ್ಪ ಬೀಳಗಿ (17) ನೀರು ಪಾಲಾದವರು ಎಂದು ತಿಳಿದುಬಂದಿದೆ. ಮೂವರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದವರು.
ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಮ್ಮಣ್ಣ ದೇವರಮನಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಕಾಣೆಯಾದ ಇನ್ನಿಬ್ಬರ ಹುಡುಕಾಟಕ್ಕಾಗಿ ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ಮುಂದುವರೆಸಿದ್ದಾರೆ.