Uncategorized

ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹11.32 ಕೋಟಿ ವಂಚನೆ ಪ್ರಕರಣ: 8 ಆರೋಪಿಗಳ ಬಂಧನ, ಭಾರಿ ಮೊತ್ತ ವಶ

ವಿಜಯಪುರ: ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಹುಕೋಟಿ ಕಬ್ಬು ವಂಚನೆ ಪ್ರಕರಣವನ್ನು ಪೊಲೀಸರು ಭೇದಿಸಿ, ಎಂಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹11,32,07,569 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರಗಳ ಪ್ರಕಾರ, 2026ರ ಫೆಬ್ರವರಿ 12ರಂದು ನಂದಿ ಸಕ್ಕರೆ ಕಾರ್ಖಾನೆ ನಿಯಮಿತದ ಪ್ರಧಾನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 29/2026 ದಾಖಲಿಸಲಾಗಿತ್ತು. ಪ್ರಕರಣವು BNS-2023ರ ಕಲಂ 316(2), 316(4), 316(5) ಹಾಗೂ 318(4) ಅಡಿಯಲ್ಲಿ ದಾಖಲಾಗಿತ್ತು.
ತನಿಖೆಯಲ್ಲಿ, 2020-21ರಿಂದ 2025-26ರವರೆಗೆ ಆರು ವರ್ಷಗಳ ಅವಧಿಯಲ್ಲಿ ಆರೋಪಿತರು ವಿವಿಧ ರೈತರ ಹೆಸರನ್ನು ದುರುಪಯೋಗಪಡಿಸಿಕೊಂಡು ಒಟ್ಟು 34,490.699 ಮೆಟ್ರಿಕ್ ಟನ್ ಕಬ್ಬನ್ನು ಮೋಸದ ಮೂಲಕ ತೂಕ ಮಾಡಿಸಿರುವುದು ಬೆಳಕಿಗೆ ಬಂದಿದೆ. ಇದರ ಮೌಲ್ಯ ₹12,33,22,793 ಆಗಿದ್ದು, ಬೋಗಸ್ ಬಿಲ್ಲುಗಳು ಮತ್ತು ರಸೀದಿಗಳನ್ನು ಸೃಷ್ಟಿಸಿ ವಿವಿಧ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ, ಬಳಿಕ ಅದನ್ನು ಪಡೆದು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸ್ ತಂಡವು ಅಲ್ಪಾವಧಿಯಲ್ಲೇ ಎಂಟು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ₹11.32 ಕೋಟಿಗೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related Articles

Leave a Reply

Your email address will not be published. Required fields are marked *

Back to top button