Uncategorized

ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ: ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ: ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದ್ದಾರೆ.

ಈಗಾಗಲೇ ಬ್ರೂಸ್‌ಪೇಟೆ ಠಾಣೆಯಲ್ಲಿ ಶಾಸಕ ಭರತ್‌ ರೆಡ್ಡಿ, ಅವರ ಅಪ್ತ ಸತೀಶ್‌ ರೆಡ್ಡಿ, ಎಎಸ್ಪಿ ಕೆ.ಪಿ.ರವಿಕುಮಾರ್, ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ವಿರುದ್ಧ ದೂರು ನೀಡಿದ್ದು ಈವರೆಗೂ ಪ್ರಕರಣ ದಾಖಲಿಸಿಲ್ಲ. ಜಿಲ್ಲೆಗೆ ಹೊಸದಾಗಿ ಐಜಿಪಿ, ಎಸ್ಪಿ ಖಡಕ್ ಅಧಿಕಾರಿಗಳು ನೇಮಕಗೊಂಡಿದ್ದು ಯಾವ ರೀತಿಯಲ್ಲಿ ತನಿಖೆ ಮಾಡಲಿದ್ದಾರೆ ಎಂಬುದಾಗಿ ಕಾದು ನೋಡುವೆ ಎಂದು ಶಾಸಕ ರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಪಿ ಸರ್ಕಲ್‌ನಲ್ಲಿ ಶಾಸಕ ಭರತ ರೆಡ್ಡಿಯನ್ನು ತಡೆಯಬಹುದಿತ್ತು. ಆದರೆ, ಪೊಲೀಸರೇ ರಕ್ಷಣೆ ನೀಡಿ ಮನೆಯ ಮುಂಭಾಗದವರೆಗೆ ಕರೆದುಕೊಂಡು ಬಂದು ಗಲಭೆ ಎಬ್ಬಿಸಿದ್ದಾರೆ. ಆದ್ದರಿಂದ, ಈ ಘಟನೆಗೆ ಪೊಲೀಸರೇ ಕಾರಣರಾಗಿದ್ದಾರೆಂದು ದೂರಿದರು.

ಈ ಪ್ರಕರಣ ಪ್ರಮುಖ ಆರೋಪಿ ಸತೀಶ್‌ ರೆಡ್ಡಿ ಬಂಧಿಸದೇ, ಭರತ್‌ ರೆಡ್ಡಿಯ ಚಿಕ್ಕಪ್ಪ ನಾರಾ ಪ್ರತಾಪ್‌ ರೆಡ್ಡಿ ಬೆಂಗಳೂರಿಗೆ ಕಳುಹಿಸಲು ಆಂಬ್ಯುಲೆನ್ಸ್ ಹತ್ತಿಸಿದ್ದಾರೆ. ಗೃಹ ಸಚಿವರು ಅಸಮರ್ಥರಿದ್ದಾರೆ ಎಂಬುದಾಗಿ ರಾಜ್ಯದ ಜನತೆ ಹೇಳುತ್ತಿದೆ. ಹಾಲಿ ಶಾಸಕನ ಮೇಲೆ ಮತ್ತೊಬ್ಬ ಶಾಸಕನ ಖಾಸಗಿ ಅಂಗರಕ್ಷಕ ಬುಲೆಟ್ ಹಾರಿಸುತ್ತಾನೆ ಎಂದರೆ ಕರ್ನಾಟಕ ಸಂಸ್ಕೃತಿ ಎಲ್ಲಿಂದ ಎಲ್ಲಿಗೆ ತರಲು ಹೊರಟಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button