ಬಸವನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಹಿಂಪಡೆಯದಿದ್ದರೆ ಏಪ್ರಿಲ್ 1ಕ್ಕೆ ಪ್ರತಿಭಟನೆ.

ಅಳಗವಾಡಿ : ಬಸವನಗೌಡ ಪಾಟೀಲ ಯತ್ನಾಳ ಅವರು ಹಿಂದುತ್ವವನ್ನು ಸದಾಕಾಲ ಜಾಗ್ರತಾವಸ್ಥೆಯಲ್ಲಿ ಇಟ್ಟುಕೊಂಡು ಬಂದವರು ಅಂತಹ ಒಬ್ಬ ನಿಷ್ಠಾವಂತ ನೇರ ನುಡಿಯ ರಾಜಕಾರಣಿಗೆ ಕೇಂದ್ರ ಬಿಜೆಪಿ ಸರ್ಕಾರ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ ಅವರ ಉಚ್ಛಾಟನೆಯನ್ನು ಹಿಂಪಡೆದು ಯತ್ನಾಳ್ ಗೌಡರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಬಿಜೆಪಿ ಕುಡಚಿ ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ ಒತ್ತಾಯಿಸಿದ್ದಾರೆ.
ಸಮೀಪದ ಮುಗಳಖೋಡ ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಯಾರೇ ಎಷ್ಟೇ ಹಗುರವಾಗಿ ಮಾತನಾಡಿದರು ಸಹ ಯತ್ನಾಳ ಅವರ ರಾಜಕೀಯ ಜೀವನಕ್ಕೆ ಕಳಂಕ ಹೆಚ್ಚಲಾಗದು. ಅಂತಹ ನಿಷ್ಠಾವಂತ ರಾಜಕಾರಣಿಯನ್ನು ಉಚ್ಚಾಟನೆ ಮಾಡಿರುವುದು ನಮ್ಮೆಲ್ಲರಿಗೂ ನೋವನ್ನುಂಟು ಮಾಡಿದೆ ಎಂದರು.
ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಅಂಗಡಿ ಬಸವನಗೌಡ ಯತ್ನಾಳ್ ಅವರಂತ ನಿಷ್ಠಾವಂತ ರಾಜಕಾರಣಿ ನಮ್ಮ ರಾಜ್ಯಕ್ಕೆ ಅತ್ಯವಶ್ಯಕವಾಗಿದೆ. ಅಂತಹ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿಗೆ ಕೇಂದ್ರ ಸರ್ಕಾರ ಉಚ್ಚಾಟನೆಯ ಅಸ್ತ್ರ ಬಳಸಿರುವುದು ಖೇದಕರ ಸಂಗತಿ. ಯೋಗಿ ಆದಿತ್ಯನಾಥ್ ರಂತೆ ಹಿಂದುತ್ವದ ತಳಹದಿಯ ಮೇಲೆ ರಾಜಕಾರಣ ನಡೆಸುತ್ತಿರುವ ಧೀಮಂತ ನಾಯಕ ಬಸವನಗೌಡ ಪಾಟೀಲ್ ಯತ್ನಾಳ. ಅಂತಹ ಪರಿಶುದ್ಧವಾದ ರಾಜಕಾರಣಿಗೆ ಈ ರೀತಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಈ ಆದೇಶವನ್ನು ಮರುಪರಿಶೀಲಿಸಿ ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು.
ಒಂದು ವೇಳೆ ಅದು ಸಾಧ್ಯವಾಗದೇ ಹೋದಲ್ಲಿ ಏಪ್ರಿಲ್ 1 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಪಾಲ ಕುರುಬಳ್ಳಿ, ಸುರೇಶ್ ಹೊಸಪೇಟಿ, ಮಹಾದೇವ ಹುಕ್ಕೇರಿ, ಸುರೇಶ ಎಮ್ ಹೊಸಪೇಟಿ, ಬಸವರಾಜ್ ಹೊಸಪೇಟಿ, ಕೆಂಪಣ್ಣ ಮುಸಿ, ಈರಪ್ಪ ಬಾಗಿ, ರಾಮನಗೌಡ ಪಾಟೀಲ್, ರಮೇಶ ಕಲಾದಗಿ, ಕಲ್ಯಾಣಿ ಮಗದುಮ್, ಶ್ರೀಮಂತ ಹೊಸಪೇಟೆ, ಎಸ್ ಕೆ ಪಾಟೀಲ, ಶ್ರೀಕಾಂತ ಖೇತಗೌಡರ ಹಾಜರಿದ್ದರು.