ಉಡುಪಿ

“ಮಾದಕ ವಸ್ತು , ಗಾಂಜಾ” ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಿದ ಸೆನ್‌ ಅಪರಾಧ ದಳದ ಪೊಲೀಸರು..

ಉಡುಪಿ : ಮಾದಕ ವಸ್ತು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಪ್ರೇಮನಾಥ, ಶೈಲೇಶ, ಪ್ರಜ್ವಲ್, ರತನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತರಿಂದ 37 ಗ್ರಾಂ 27 ಮಿಲಿ ಗ್ರಾಂ ತೂಕದ ಎಂಡಿಎಂಎ, 1 ಕೆಜಿ 112 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು, ಎಂಡಿಎಂಎ ಅಂದಾಜು ಮೌಲ್ಯ ರೂ. 2 ಲಕ್ಷ , ಗಾಂಜಾದ ಅಂದಾಜು ಮೌಲ್ಯ ರೂ. 87,500 ಆಗಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ 5 ಮೊಬೈಲ್‌ ಫೋನ್‌, ಅವುಗಳ ಅಂದಾಜು ಮೌಲ್ಯ ರೂ. 41 ಸಾವಿರ, ಗಾಂಜಾವನ್ನು ಸಾಗಣೆ ಮಾಡಲು ಬಳಸಿದ ಬ್ಯಾಗ್‌ ಇನ್ನಿತರ ವಸ್ತುಗಳು ಸಹಿತ ನಗದು ರೂಪಾಯಿ 7130 ಅನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಎಂಡಿಎಂ ಪೌಡರ್‌ ಅನ್ನು ಬೆಂಗಳೂರಿನಿಂದ ಖರೀದಿಸಿರುವುದಾಗಿ ಆರೋಪಿ ಪ್ರೇಮ್‌ ತಿಳಿಸಿದ್ದಾನೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button