ಬೆಳಗಾವಿ
ಬೆಳಗಾವಿಯಲ್ಲಿ ವ್ಯಕ್ತಿಯ ಮೇಲೆ ಮೂರು ಕರಡಿಗಳಿಂದ ಡೆಡ್ಲಿ ಅಟ್ಯಾ ಕ್!

ಬೆಳಗಾವಿಯ: ಮುಖದ ಭಾಗವನ್ನೇ ಕಿತ್ತುಹಾಕಿದ ಕರಡಿಗಳು! ಬೆಳಗಾವಿ ಜಿಲ್ಲೆಯ ಕಣಕುಂಬಿ ಅರಣ್ಯ ವ್ಯಾಪ್ತಿಯ ಚಿಗುಳೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಿಗುಳೆ ಗ್ರಾಮದ ವಿಲಾಸ ಚಿಕ್ಕಲಾಕರ್ (55)ಎಂಬುವವರ ಮೇಲೆ ಕರಡಿಗಳು ದಾಳಿ ನಡೆಸಲಾಗಿದೆ.
ಒಂದು ದೊಡ್ಡ ಕರಡಿ, ಎರಡು ಮರಿಗಳಿಂದ ದಾಳಿ ಶಂಕೆ! ಯುಗಾದಿ ಹಬ್ಬದ ಹಿನ್ನೆಲೆ ಬೇವು,ಮಾವಿನ ಎಲೆ ತರೋದಕ್ಕೆ ಜಮೀನಿಗೆ ಹೋದಾಗ ಕರಡಿಗಳು ಅಟ್ಯಾಕ್ ಮಾಡಿದೆ.
ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕರಡಿ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಣಕುಂಬಿ RFO ಶಿವಕುಮಾರ್ ಭೇಟಿ,ಪರಿಶೀಲನೆ ನಡೆಸಿ ಬಳಿಕ ಆಂಬ್ಯುಲೇನ್ಸ ಕರೆಯಿಸಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಆರ್ ಎಫ್ಓ ಶಿವಕುಮಾರ್ ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.