ಹುಬ್ಬಳ್ಳಿ
ನವನಗರ ಬಳಿ ಮಹಿಳೆಗೆ KSRTC ಸಾರಿಗೆ ಬಸ್ಸ ಡಿಕ್ಕಿ; ಗಂಭೀರ ಗಾಯ

ಧಾರವಾಡ: ಪದಚಾರಿ ಮಹಿಳೆಗೆ KSRTC ಸರ್ಕಾರಿ ಸಾರಿಗೆ ಬಸ್ಸ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಗೆ ಗಂಭೀವಾದ ಗಾಯವಾಗಿರೋ ಘಟನೆ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ನವನಗರ ಕ್ರಾಸ್ ಬಳಿ ಬುಧುವಾರ ರಾತ್ರಿ ನಡೆದಿದೆ.
ಘಟನೆ ನವನಗರದಲ್ಲಿರುವ ಕ್ಯಾನ್ಸರ್ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ KA63 F0390 ನಂಬರ್ ಹೊಂದಿರುವ ಬಸ್, ರಸ್ತೆಯನ್ನು ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಗುರುತು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆ ಬಳಿಕ ಮಹಿಳೆಯ ವಿವರ ತಿಳಿದು ಬರಬೇಕಾಗಿದೆ.