ಬೆಳಗಾವಿ
ಎತ್ತಾಕೊಂಡು ಹೋಗಿ ಮನಬಂದಂತೆ ಯುವಕನನ್ನು ಥಳಿಸಿದ ಗ್ಯಾಂಗ್

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಹತ್ತಕ್ಕೂ ಅಧಿಕ ಗುಂಪಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಗಾಯಾಳು ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ನಗರದ ಶಿವಾಜಿ ರೋಡನ ಕೊನ್ವಾಳ ಗಲ್ಲಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿ ತಾಲೂಕಿ ಆನಗೋಳ ಗ್ರಾಮದ ಶಿವರಾಜ ಮೋರೆ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಸ್ಪೇರಸ್ಪಾರ್ಟ್ ಅಂಗಡಿಯಲ್ಲಿ ಕೇಲಸ ಮಾಡುತ್ತಿದ್ದ ಯುವಕನನ್ನು ಎತ್ತಾಕೊಂಡು ಹೋಗಿ ಕಲ್ಲು, ಕಟ್ಟಿಗಳಿಂದ ಮನಬಂದಂತೆ ಥಳಿಸಿರುವ ಆರೋಪ ಮಾಡಲಾಗಿದೆ.
ಹಲ್ಲೆಗೋಳಗಾದ ಯುವಕನನ್ನು ಬೈಕ್ ನಲ್ಲಿ ಒತ್ತಾಯಪೂರ್ವಕವಾಗಿ ಯುವಕನನ್ನು ಹತ್ತಿಸಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.