ಬೆಳಗಾವಿ
ಬೆಳಗಾವಿಯಲ್ಲಿ 20ಕ್ಕೂ ಅಧಿಕ ಮೇವಿನ ಬಣಿವೆಗಳಿಗೆ ಬೆಂಕಿ,ಸುಟ್ಟು ಭಸ್ಮ..!

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆಯ ಮೈದಾನದಲ್ಲಿ ರೈತರು ಒಟ್ಟಿದ್ದ ಸುಮಾರು 20ಕ್ಕೂ ಹೆಚ್ಚು ಹೊಟ್ಟಿನ ಮತ್ತು ಕಣಕಿ ಬಣವೆಗಳಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ.
ಬೈಲಹೊಂಗಲ ಅಗ್ನಿಶಾಮಕ ದಳದವರು ಗ್ರಾಮಸ್ಥರ ಸಹಾಯದೊಂದಿಗೆ ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.