ಬೆಳಗಾವಿ

ಬೆಳಗಾವಿಯಲ್ಲಿ ಖಾಸಗಿ ಶಾಲೆಯ ಶುಲ್ಕದಲ್ಲಿ ಏಕಾಏಕಿ ಹೆಚ್ಚಳ… ಶಾಲೆಗೆ ಮುತ್ತಿಗೆ ಹಾಕಿ ಪೋಷಕರ ಆಕ್ರೋಶ…!

ಬೆಳಗಾವಿ : ಮೊದಲೇ ಹಾಲಿನ, ವಿದ್ಯುತ್, ತೈಲ್ ದರ ಏರಿಕೆಯಿಂದ ಶಾಕ್ ನಲ್ಲಿರುವ ಬೆಳಗಾವಿ ಜನ, ಈಗ ಖಾಸಗಿ ಶಾಲೆಯಲ್ಲಿನ ಪ್ರವೇಶ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ವನಿತಾ ವಿದ್ಯಾಲಯ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಖಾಸಗಿ ಶಾಲೆಯೊಂದರ ಪ್ರವೇಶ ಶ಼ುಲ್ಕ ಏಕಾಏಕಿ ಹೆಚ್ಚಳಗೊಂಡಿದ್ದರಿಂದ ಆಕ್ರೋಶಗೊಂಡ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು‌. ಈಗಾಗಲೇ ರಾಜ್ಯದಲ್ಲಿ ಅಗತ್ಯ ವಸ್ತುಗಳಾದ ಹಾಲು, ಮೊಸರು, ತೈಲ ಬೆಲೆ, ಬಸ್‌ ಪ್ರಯಾಣ ದರ ಏರಿಕೆಯಾಗಿದ್ದು, ಕೆಲ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರುವುದು ಪೋಷಕರಿಗೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ. ಡೋನೆಷನ್ ಕಡಿಮೆ ಮಾಡುತ್ತೇವೆ ಎಂದು ಈಗ ಏಕಾಏಕಿ ಪ್ರವೇಶ ಶುಲ್ಕ ಹೆಚ್ಚಳ ಮಾಡಿದ್ದು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದರು. ಆದರೇ ಕಳೆದ ಬಾರಿಯಷ್ಟೇ ಹೆಚ್ಚಿಸಿದ ಶುಲ್ಕ ಈ ಬಾರಿ ಮತ್ತೇ ಹೆಚ್ಚಿಸಿದ್ದಾರೆ. ಒಂದೇ ಮನೆಯಲ್ಲಿ 2-3 ಮಕ್ಕಳಿರುವವರ ಗತಿ ಏನಾಗಬೇಕು. ಈ ಬಾರಿ ಡೊನೇಷನ್ ಇಲ್ಲ ಎನ್ನುವವರು, ಕಳೆದ ಬಾರಿ ಡೊನೇಷನ್ ನೀಡಿದವರ ದುಡ್ಡು ಏನಾಯಿತು ಎಂದು ಶುಲ್ಕ ಹೆಚ್ಚಳದ ವಿರುದ್ಧ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಪ್ರತಿ ಮೂರು ವರ್ಷಕ್ಕೆ 2000 ಸಾವಿರ ಹೆಚ್ಚಳ ಮಾಡುತ್ತಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಕಳೆದ ಬಾರಿಯಷ್ಟೇ ಹೆಚ್ಚಿಸಿ ಈ ಬಾರಿ ಏಕಾಏಕಿ 5000 ರೂಪಾಯಿ ಹೆಚ್ಚಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೇ, ಇದು ತಮ್ಮ ಅಸ್ತಿತ್ವಕ್ಕೆ ಬರುವುದಿಲ್ಲ. ಮ್ಯಾನೇಜ್’ಮೆಂಟ್ ಅಸ್ತಿತ್ವಕ್ಕೆ ಬರುತ್ತದೆ ಎನ್ನುತ್ತಾರೆ. ಹಾಗಾದರೇ, ಮ್ಯಾನೇಜ್’ಮೆಂಟ್ ಬಂದಾಗ ಪೋಷಕರನ್ನು ಕರೆದು ವಿಶ್ವಾಸಕ್ಕೆ ಯಾಕೆ ತೆಗೆದುಕೊಳ್ಳುವುದಿಲ್ಲ. ಕೂಡಲೇ ಈ ನಿರ್ಣಯವನ್ನು ಕೈ ಬಿಡದಿದ್ದರೇ, ಉಗ್ರ ಹೋರಾಟ ನಡೆಸುವುದಾಗಿ ಪಾಲಕರು ಎಚ್ಚರಿಕೆಯನ್ನು ನೀಡಿದರು.

ಇನ್ನು ಶಾಲೆ ಪ್ರಿನ್ಸಿಪಾಲ್ ಜೋಷ್ಪಿನ್ ಗುಂಟಿ ಅವರು ಪಾಲಕರು ಶುಲ್ಕ ಹೆಚ್ಚಳವನ್ನು ವಿರೋಧಿಸಿದ್ದು, ಮ್ಯಾನೇಜ್’ಮೆಂಟ್ ಗಮನಕ್ಕೆ ತರಲಾಗುವುದು. ಅಲ್ಲದೇ ಈಗಾಗಲೇ ಪೋಷಕರಿಗೆ ಶುಲ್ಕ ಹೆಚ್ಚಳದ ಮಾಹಿತಿಯನ್ನು ನೀಡಲಾಗಿತ್ತು. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲೆಂದು ಹೊಸ ದಾಖಲಾತಿಗಳಿಗೆ ಡೋನೆಷನ್’ನಿಂದ ವಿನಾಯಿತಿ ನೀಡಿ, ಕೇವಲ ಶುಲ್ಕವನ್ನು ಮಾತ್ರ ಆಕರಿಸಲಾಗುತ್ತಿದೆ. ಬೇರೆಯ ಶಾಲೆಗಳಿಗಿಂತ ನಮ್ಮ ಶಾಲೆಯಲ್ಲಿ ಶುಲ್ಕ ಕಡಿಮೆಯಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button