ಮಾವಿನ ಹಣ್ಣಿನ ಮಾರುಕಟ್ಟೆಗೆ ಅಂಚೆ ಇಲಾಖೆ; ಆನ್ಲೈನ್ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ , ಅಂಚೆಯಣ್ಣ.

ಬೆಂಗಳೂರು: ಮಾವಿನ ಸುಗ್ಗಿ ಪ್ರಾರಂಭವಾಗಿದೆ. ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಿದ್ದು, ಅಂಚೆಯಣ್ಣ ಮನೆ ಬಾಗಿಲಿಗೆ ಮಾವು ಹೊತ್ತು ತರಲು ಸಿದ್ಧನಾಗಿದ್ದಾನೆ. ಇನ್ನೇಕೆ ತಡ ಇಂದೇ ಆನ್ಲೈನ್ನಲ್ಲಿ ಬುಕ್ ಮಾಡಿ. ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಮಾರುಕಟ್ಟೆಗೆ ಹೋಗಿ ಖರೀದಿಸತ್ತೇವೆ. ಇನ್ನೂ ಕೆಲವರು ಆನ್ಲೈನ್ನಲ್ಲಿ ಆರ್ಡರ್ ಮಾಡಿ ಕೊಳ್ಳುತ್ತಾರೆ. ಇದೀಗ ಮಾವಿನ ಹಣ್ಣಿನ ಮಾರುಕಟ್ಟೆಗೆ ಅಂಚೆ ಇಲಾಖೆ ಕಾಲಿಟ್ಟಿದೆ. ವಿವಿಧ ತಳಿಯ ಮಾವಿನ ಹಣ್ಣನ್ನು ಆನ್ಲೈನ್ನಲ್ಲಿ ಬುಕ್ ಮಾಡಿದರೆ ಸಾಕು, ಅಂಚೆಯಣ್ಣ ಮನೆ ಬಾಗಿಲಿಗೆ ಮಾವನ್ನು ತಲುಪಿಸುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ರೈತರ ವೆಬ್ಸೈಟ್ನಲ್ಲಿ ಬುಕ್ ಮಾಡಿದ ಮಾವಿನ ಹಣ್ಣುಗಳನ್ನು ಭಾರತೀಯ ಅಂಚೆ ಇಲಾಖೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಏಪ್ರಿಲ್ 7ರಿಂದ ಬೆಂಗಳೂರಿನಲ್ಲಿ ಈ ಮನೆ ಮನೆಗೆ ಮಾವು ಡೆಲಿವರಿ ಕಾರ್ಯ ಆರಂಭವಾಗಿದೆ. ಗ್ರಾಹಕರು ಬುಕ್ ಮಾಡಲು ಮಾವು ಅಭಿವೃದ್ದಿ ನಿಮಗಮದ ವೆಬ್ಪೋರ್ಟಲ್ ಕರಿಸಿರಿ www.karsirimangoes.karnataka.gov.in ಭೇಟಿ ನೀಡಬೇಕು.
ನಂತರ ತಮಗೆ ಬೇಕಾಗುವ ತಳಿ ಹಣ್ಣನ್ನು ಆರ್ಡರ್ ಮಾಡಬಹುದು. ಹೀಗೆ ಬುಕ್ ಮಾಡಿದ ಹಣ್ಣು ನೇರವಾಗಿ ರೈತರಿಂದ ಗ್ರಾಹಕರ ಕೈಗೆ ಸೇರುತ್ತದೆ. ಒಂದು ಬಾಕ್ಸ್ನಲ್ಲಿ 3.5 ಕೆ.ಜಿ ಮಾವಿನ ಹಣ್ಣು ಇರಲಿದೆ. ಈ ಹಣ್ಣಿನ ಮೊತ್ತದ ಜೊತೆಗೆ ಪಾರ್ಸೆಲ್ ಚಾರ್ಜ್ ಸೇರಿ ಅಂಚೆ ಇಲಾಖೆ 82 ರೂಪಾಯಿ ತೆಗೆದುಕೊಳ್ಳಲಿದೆ. ಒಂದೊಂದು ಮಾವಿನ ತಳಿಯ ಹಣ್ಣಿಗೆ ಒಂದೊಂದು ಬೆಲೆ ಇದೆ.