ಬೆಂಗಳೂರುರಾಜಕೀಯರಾಜ್ಯ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ; ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಸಭೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (Electric Rapid Transit (e-RT) ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿ, ಸಾಧಕ-ಭಾದಕಗಳ ಕುರಿತು ಶನಿವಾರ (ಏ.12) ಚರ್ಚೆ ನಡೆದಿದೆ. ಈ ಯೋಜನೆಯ ಸಾಧ್ಯಾ ಸಾಧ್ಯತೆ ಮತ್ತು ಅವಕಾಶಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಭೆಯಲ್ಲಿ ವಿವರಿಸಿದರು.

ಈ ವೇಳೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ ಎಲೆಕ್ಟ್ರಿಕ್ ರಾಪಿಡ್ ಟ್ರಾನ್ಸಿಟ್ (e-RT) ಆರಂಭಿಸುವ ಕುರಿತು ಎಚ್‌ಇಎಸ್‌ಎಸ್ ಎಜಿ, ಹೆಸ್‌ ಇಂಡಿಯಾ ಮತ್ತು ಎಸ್‌ಎಸ್‌ಬಿ ಎಜಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯೋಜನೆ ಅನುಷ್ಠಾನ ಕುರಿತು ಮೂರು ತಿಂಗಳ ಒಳಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಇದು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದ್ದು ನಗರದಲ್ಲಿ ಎತ್ತರಿಸಿದ ರಸ್ತೆ (ಫ್ಲೈ ಓವರ್​) ಹಾಗೂ ಇತರೆಡೆ ನೆಲದ ಮೇಲೆ ಸಂಚರಿಸಲಿದೆ. ಇದರಲ್ಲಿ 250 ಜನರು ಒಮ್ಮೆಗೆ ಪ್ರಯಾಣಿಸಬಹುದಾಗಿದೆ. ಕಳೆದ ಒಂದು ವರ್ಷದಿಂದ ಯೋಜನೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಸ್ವತಃ ಕಾರ್ಮಿಕ ಸಚಿವ ಸಂತೋಷ ಲಾಡ್, ಸ್ವಿಟ್ಜರಲ್ಯಾಂಡ್​ಗೆ ಹೋಗಿ ಸಾಧ್ಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಬಂದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button