ಹುಬ್ಬಳ್ಳಿಯಲ್ಲಿ 5 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದವನನ್ನು ಎನ್ಕೌಂಟರ್ ಮಾಡಿದ ಪೊಲೀಸ್ “ಕಮಿಷನರ್ ಶಶಿಕುಮಾರ್”

ಹುಬ್ಬಳ್ಳಿ : ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಎನ್ ಕೌಂಟರ್ ಅಶೋಕನಗರ ಪೊಲೀಸರಿಂದ ನಡೆದಿದೆ.
ಹುಬ್ಬಳ್ಳಿ ಇತಿಹಾಸದಲ್ಲಿ ಐವತ್ತು ವರ್ಷದ ನಂತರ ಮೊದಲ ಎನ್ ಕೌಂಟರ್ ಇದಾಗಿದ್ದು. ಇಂದು ಬೆಳಗಿನ ಜಾವ 11 ಗಂಟೆಗೆ ಬಾಲಕಿ ಅಪಹರಿಸಿ ಹತ್ಯೆ ಮಾಡಿದ್ದ ಬಿಹಾರ್ ಮೂಲದ ರಕ್ಷಿತ್ ಕ್ರಾಂತಿ 40 ವರ್ಷ ವಯಸ್ಸು ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ.
ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ವಿವಿಧ ಸ್ಥಳಗಳಲ್ಲಿ ಪಕ್ಷಾತೀತವಾಗಿ ಆರೋಪಿಗೆ ಶಿಕ್ಷೆ ಯಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಪೊಲೀಸರಿಂದ ಅಧಿಕೃತವಾಗಿ ಆರೋಪಿ ಬಂಧಿಸಿ ಶೂಟ್ ಮಾಡಲಾಗಿದೆ ಗುಂಡಿನ ದಾಳಿಯಲ್ಲಿ ತೀವ್ರ ರಕ್ತಸ್ರಾವದಿಂದ ಆರೋಪಿ ಬಳಲುತ್ತಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಗೆ ಆರೋಪಿ ಶವ ದಾಕಲಿಸಲಾಗಿದ್ದು ಆಸ್ಪತ್ರೆಯತ್ತ ಆಗಮಿಸುತ್ತಿರುವ ಆಯುಕ್ತ ಎನ್ ಶಶಿಕುಮಾರ್ . ಎನ್ ಕೌಂಟರ್ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ಎಲ್ಲೇಡೆ ಸಾರ್ವಜನಿಕರಿಂದ ಹರ್ಷೋದ್ಗಾರ ವ್ಯಕ್ತವಾಗಿದೆ.