ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಸಿದ್ದಾರೂಢರ ಸ್ವಾಮಿಯವರ ರಥೋತ್ಸವ.

ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸಿದ್ದಾರೂಢರ ಸ್ವಾಮೀಜಿಯವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಿದ್ದಾರೂಢರ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿ ರಥೋತ್ಸವ ಜರುಗಿತು. ರಥೋತ್ಸವ ಪ್ರಾರಂಭವಾಗುತ್ತಿದಂತೆ ಭಕ್ತರ ಹರ್ಷದ್ಗೋಗಾರ ಮುಗಿಲು ಮುಟ್ಟಿತ್ತು. ರಥೋತ್ಸವ ಹೋಗುತ್ತಿದಂತೆ ಭಕ್ತರು ರಥದ ಮೇಲೆ ಹೂವುಗಳನ್ನು ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.ಓಂ ನಮ ಶಿವಾಯ ಮಂತ್ರ ಘೋಷದೊಂದಿಗೆ,ಸಕಲವಾದ್ಯಗಳೊಂದಿಗೆ ಈ ರಥೋತ್ಸವ ಜರುಗಿತು.ರಥೋತ್ಸವದಲ್ಲಿ ಚಿದ್ಘಾನಂದ ಸ್ವಾಮೀಜಿಯವರು ಕುಳಿತು ಭಕ್ತರನ್ನು ಆರ್ಶಿವಾದಿಸಿದರು.ರಥಕ್ಕೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.ರಥೋತ್ಸವ ಮುಂಚಿತವಾಗಿ ಗ್ರಾಮದಾದ್ಯಂದತ ಸಿದ್ಧಾರೂಢರ ಪಲ್ಲಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ, ಸುಮಂಗಲಿಯರ ಬೃಹತ್ ಕುಂಭಮೇಳದೊಂದಿಗೆ ಅದ್ದೂರಿಯಾಗಿ ಜರುಗಿತು.
ಸಿದ್ದಾರೂಢ ಮಠದ ಮಠಾಧೀಶರಾದ ಚಿದ್ಘಾನಂದ ಸ್ವಾಮೀಜಿಯವರು ಮಾತನಾಡಿ ಇವತ್ತು ರಥೋತ್ಸವ ಅದ್ದೂರಿಯಾಗಿ ಜರುಗಿದೆ.ರಥೋತ್ಸವದಲ್ಲಿ ಸೇವೆ ಮಾಡಿದ ಭಕ್ತರಿಗೆ ಜದ್ಗುರು ಸಿದ್ದಾರೂಢರು ಸಕಲ ಸನ್ಮಂಗಳವನ್ನು,ಆಯುಷ್ಯ,ಆರೋಗ್ಯ,ಐಶ್ವರ್ಯ,ಆನಂದವನ್ನು ನೀಡಲಿ ಎಂದು ಹಾರೈಸಿದರು.
ಬಳಿಕ ಗ್ರಾಮದ ವಕೀಲರು ಭಕ್ತರಾದ ಸಿದಗೌಡ ಪಾಟೀಲ ಮಾತನಾಡಿ ಸಿದ್ದಾರೂಢರ ಸ್ವಾಮೀಯವರ ರಥೋತ್ಸವ ಕಳೆದ 5 ವರ್ಷಗಳಿಂದ ವಿಜೃಂಭಣೆಯಿಂದ ಜರುಗುತ್ತಿದೆ.ಈ ವರ್ಷ ಕೂಡಾ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಜರುಗಿದೆ ಎಂದರು.