ಪ್ರವಾಸಿ ಮಂದಿರದಲ್ಲಿ ಮಧ್ಯಪಾನ ಬಾಟಲಿಗಳ ಭಂಡಾರ

ತಾಳಿಕೋಟಿ ನಗರದ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಮದ್ಯಪಾನ ಖಾಲಿ ಬಾಟಲಿಗಳ ಭಂಡಾರ ಹೊಂದಿದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ ದಿಂದ ಜನರು ಸಂಜೆಯಾದರೆ ಮಧ್ಯಪಾನ ಸೇವನೆ ಮಾಡಲು ಜನರು ಪ್ರವಾಸಿ ಮಂದಿರಕ್ಕೆ ಆಗಮಿಸಿ ಮಧ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಅವರಣದಲ್ಲಿ ಎಸೆಯುವುದರಿಂದ ದುರ್ಗಂದಮಯವಾಗಿದೆ .
ಈ ಪ್ರವಾಸಿ ಮಂದಿರಕ್ಕೆ ದಿನಂಪ್ರತಿ ಹಲವು ಗಣ್ಯರು ಹಾಗೂ ಮಂತ್ರಿಗಳು,ಶಾಸಕರು ಆಗಮಿಸುತ್ತಾರೆ ಆದರೆ ನಿರ್ವಹಣೆ ಮಾಡುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷದಿಂದ ಈ ಪ್ರವಾಸಿ ಮಂದಿರ ಪರಿಸರ ಹಾಳಾಗಿರೋದು ಕಂಡು ಸಾರ್ವಜನಿಕರು ದೂರುತ್ತಿದ್ದಾರೆ ಲೋಕೋಪಯೋಗಿ ಇಲಾಖೆಯಿಂದ ಪ್ರವಾಸಿ ಮಂದಿರದ ಸ್ವಚ್ಛತೆ ಮತ್ತು ಉದ್ಯಾನವನ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆ ಮಾಡುತ್ತದೆ ಆದರೆ ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಸ್ವಚ್ಛತೆ ಮಾಡದೇ ಕುಡುಕರ ಹಾವಳಿಯಿಂದ ಅವರಣದಲ್ಲಿ ಮಧ್ಯದ ಬಾಟಲಿಗಳು ಕಾಣಬಹುದು ಇದೇ ರೀತಿ ಮುಂದುವರೆದರೆ ಪ್ರವಾಸಿ ಮಂದಿರವು ಕುಡುಕರ ಅಡ್ಡವಾಗಿ ನಿರ್ಮಾಣವಾಗುವುದು ಸಂಶೆಯವಿಲ್ಲ ಎಂದು ಸಾರ್ವಜನಿಕರು ಆತಂಕ ಪಡುತ್ತಿದ್ದಾರೆ.
ಈ ಪ್ರವಾಸಿ ಮಂದಿರವು ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಲು ಪ್ರವಾಸಿ ಮಂದಿರಕ್ಕೆ ಹೊಸದಾಗಿ ಅಧಿಕಾರಿಗಳನ್ನು ನೇಮಿಸಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗಣ್ಯರಿಗೆ ಅನುಕೂಲವಾಗಲು ಸ್ಥಳೀಯ ಶಾಸಕರು ಗಮನ ಹರಿಸಿ ಈ ಕೊರತೆಯನ್ನು ನಿವಾರಿಸುತ್ತಾರೆ ಸಾರ್ವಜನಿಕರ ಆಶಯವಾಗಿದೆ.