Uncategorized

ಬೈಕ್ ಕಳ್ಳನ ಜೋತೆ ವಿವಿಧ ಪ್ರಕರಣಗಳಲ್ಲಿ ಒಂಭತ್ತು ಆರೋಪಿಗಳ ಬಂಧನ

ಕಲಬುರಗಿ:  ಜಿಲ್ಲೆ ಮಾಡಬೂಳ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಜಾನುವಾರು ಕಳ್ಳರನ್ನ ಬಂಧಿಸಿದ್ದಾರೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ. ಏ17 ರಂದು ಮಧ್ಯಾನ 2 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಅಕ್ಲಾಕ್ ಚೌಧರಿ, ಮಹ್ಮದ್ ಮುಸ್ತಾಕ್, ಶಕೀಲ್ ಅಹ್ಮದ್ ಸಹಿತ ಮೂವರನ್ನ ಬಂಧಿಸಿ 3 ಲಕ್ಷ ರೂ ನಗದು ಹಣ, ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ. ಇನ್ನೂ ಚಿತ್ತಾಪುರ ಪೊಲೀಸರು ಓರ್ವ ಕುಖ್ಯಾತ ಬೈಕ್ ಕಳ್ಳನನ್ನ ಬಂಧಿಸಿದ್ದು, ಬಂಧಿತ ಬೈಕ್ ಕಳ್ಳ ನಿಂಗಪ್ಪನಿಂದ 3 ಮೌಲ್ಯದ 11 ಬೈಕ್‌ಗಳನ್ನ ಜಪ್ತಿ ಮಾಡಲಾಗಿದ್ರೆ, ಯಡ್ರಾಮಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಆರೋಪಿ ಗಂಗಾಧರ್ ಎಂಬಾತನನ್ನ ಬಂಧಿಸಿ, ಬಂಧಿತನಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ…

 

Related Articles

Leave a Reply

Your email address will not be published. Required fields are marked *

Back to top button