
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ ಆರೋಪಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅಪಘಾತ ಎಸಗಿದ ಲಾರಿ ಚಾಲಕ ಎಸ್ಕೇಪ್ ಆಗಿದ್ದ. ಇದೀಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂಬಾತನನ್ನು ಕಿತ್ತೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಅಪಘಾತ ಎಸಗಿದ ಲಾರಿಯನ್ನೂ ಜಪ್ತಿ ಮಾಡಿದ್ದಾರೆ.
ಜನವರಿ 14, 2025ರಂದು ರಂದು ಬೆಳಗಿನ ಜಾವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಅಪಘಾತವಾಗಿತ್ತು. ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಚಿಕಿತ್ಸೆ ಪಡೆದಿದ್ದರು. ಈಗ ಮೂರು ತಿಂಗಳ ನಿರಂತರ ಕಾರ್ಯಾಚರಣೆ ನಡೆಸಿದ ಕಿತ್ತೂರು ಪೊಲೀಸರು, . ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅಪಘಾತ ಎಸಗಿದ ಲಾರಿ ಚಾಲಕ ಎಸ್ಕೇಪ್ ಆಗಿದ್ದ. ಇದೀಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂಬಾತನನ್ನು ಕಿತ್ತೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಾಹನಗಳ ಮೇಲ್ಮೈ ಬಣ್ಣದ ಸ್ಯಾಂಪಲ್’ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಕಾರ್ಯಾಚರಣೆಯನ್ನು ನಡೆಸಲಾಗಿದೆ. ಚಾಲಕನನ್ನು ಹಿಟ್ ಆಂಡ್ ರನ್ ಪ್ರಕರಣದಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶೀಘ್ರದಲ್ಲೇ ಚಾರ್ಜ್’ಶೀಟ್ ಸಲ್ಲಿಸಲಾಗುವುದು ಎಂದರು. ಸಾಮಾನ್ಯವಾಗಿ ಹಿಟ್ ಆಂಡ್ ರನ್ ಕೇಸಿನಲ್ಲಿ 3 ರಿಂದ 7 ವರ್ಷದ ವರೆಗೆ ಶಿಕ್ಷೆಯಾಗುತ್ತದೆ. ವಿಚಾರಣೆಯ ಬಳಿಕ ನ್ಯಾಯಾಲಯ ತೀರ್ಪನ್ನು ಪ್ರಕಟಿಸಲಿದೆ. ಅಪಘಾತದಲ್ಲಿ ಜೀವಹಾನಿಯಾಗಲಿಲ್ಲವೆಂದರೂ ಅಪಘಾತದ ಬಳಿಕ ಓಡಿ ಹೋಗಿರುವುದು ತಪ್ಪು ಎಂದು ಮಾಧ್ಯಮಗೊಷ್ಟಿಯಲ್ಲಿ ಎಸ್ಪಿ. ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ. ಬೈಟ್
ಬೀಡಿನಲ್ಲಿ ವೃದ್ಧ ದಂಪತಿಗಳ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು. ಬೈಟ್