ಬೆಳಗಾವಿ

ಬೆಳಗಾವಿ ಹಾಸ್ಟೆಲ್‌ಗೆ ಎಂಎಲ್‌ಸಿ ನಾಗರಾಜ್ ಯಾದವ್ ದಿಢೀರ್ ‌ವಿಜಿಟ್

ಬೆಳಗಾವಿ:  ಸಂಗಮೇಶ್ವರ ನಗರದಲ್ಲಿರುವ ಡಾ. ಅಂಬೇಡ್ಕರ್ ‌ಮೆಟ್ರಿಕ್‌‌ ನಂತರದ ಬಾಲಕರ ವಸತಿ ನಿಲಯಕ್ಕೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ದಿಢೀರ್ ಭೇಟಿ ನೀಡಿದರು.

ಬುಧವಾರ ರಾತ್ರಿ 10 ಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಸತಿ ನಿಲಯದಲ್ಲಿನ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಊಟದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ಕೆಲಹೊತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ವಸತಿ ನಿಲಯಗಳಿಗೆ ಸರ್ಕಾರ ಸಾಕಷ್ಟು ‌ಪ್ರಮಾಣದಲ್ಲಿ ವೆಚ್ಚ ಮಾಡ್ತಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಸಾಮಾನ್ಯ ವರ್ಗದ ಜನರ ಜೊತೆಗೆ ಸ್ಪರ್ಧೆ ಮಾಡುವಂತೆ ಸಿದ್ಧರಾಗಬೇಕು. ಇಂಜಿನಿಯರಿಂಗ್, ಕಾನೂನು ವಿದ್ಯಾರ್ಥಿಗಳು ಹೆಚ್ಚೆಚ್ಚು ಕೌಶಲ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಇದೆ ಸಮಯದಲ್ಲಿ ಶೌಚಗೃಹಗಳ‌ ಸ್ವಚ್ಚತೆಗೆ ಆದ್ಯತೆ ನೀಡ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ನಿಲಯ ಪಾಲಕ ವಿನೋದ್ ಅವರಿಗೆ ಎಂಎಲ್‌ಸಿ ನಾಗರಾಜ್ ಯಾದವ್ ನಿರ್ದೇಶನ ನೀಡಿದರು.

.

Related Articles

Leave a Reply

Your email address will not be published. Required fields are marked *

Back to top button