ಬೆಳಗಾವಿಯಲ್ಲಿ ಶೂಟೌಟ್; ಗಂಭೀರವಾಗಿ ಗಾಯಗೊಂಡ ಯುವಕ.. ಆಗಿದ್ದೇನು
ಬೆಳಗಾವಿಯಲ್ಲಿ ಶೂಟೌಟ್; ಗಂಭೀರವಾಗಿ ಗಾಯಗೊಂಡ ಯುವಕ.. ಆಗಿದ್ದೇನು

ಬೆಳಗಾವಿಯಲ್ಲಿ ಶೂಟೌಟ್; ಗಂಭೀರವಾಗಿ ಗಾಯಗೊಂಡ ಯುವಕ..
ಆಗಿದ್ದೇನು
ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಪಾಪಿಗಳು. ಬೆಳಗಾವಿಯಲ್ಲಿ ಪುನೀತ್ ಕುಮಾರ್ ಎಂಬುವವರಿಗೆ ಈ ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗಳಾಗಿವೆ.
ಗಾಯಾಳುವನ್ನು ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೊಡೆ ಹಾಗೂ ಗಲ್ಲಕ್ಕೆ ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದಾರೆ ಪುನೀತ್. ಬೆಳಗಾವಿಯ ಮಹಾಂತೇಶ್ ನಗರದ ನಂದಿನಿ ಡೈರಿ ಹತ್ತಿರ ಈ ಫೈರಿಂಗ್ ನಡೆದಿದೆ.
ಯುವಕನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಮಹಾಂತೇಶ ನಗರದ ನಂದಿನಿ ಡೈರಿ ಬಳಿ ನಡೆದಿದೆ.
ಯುವನಕನ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಬೆಳಗಾವಿ ಟಿಳಕವಾಡಿಯ ನಿವಾಸಿ ಪ್ರನೀತ್ ಕುಮಾರ (31) ಎಂಬಾತ ಮಹಾಂತೇಶ ನಗರದ ಕಡೆ ಬಂದಿದೆ ಈ ವೇಳೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಗಾಯಾಳು ಯುವಕನಿಗೆ ಬಿಮ್ಸ್ ನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೊಡೆ ಹಾಗೂ ಗಲ್ಲಕ್ಕೆ ಗುಂಡು ತಗುಲಿ ಪುನಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನೂ ದೇಹಕ್ಕೆ ತಾಗಿದ ಗುಂಡುಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಗಾಯಾಳು ಆಸ್ಪತ್ರೆಗೆ ಬಂದಿದ್ದಾನೆ.
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನ ಮೇಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಾಳಮಾರುತಿ ಠಾಣೆಯ ಎಸಿಪಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಯುವಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆಗಮಿಸಿ, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಾಳುವಿನ ಆರೋಗ್ಯ ವಿಚಾರಣೆ ನಡೆಸಿದ್ದಾರೆ.