
ಧಾರವಾಡ: ಹೊರವಲಯ ನರೇಂದ್ರ ಮುಮ್ಮಿಗಟ್ಟಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾವರ್ ಗ್ರೀಡ್ ಬಳಿ ಇಒ ದುರ್ಘಟನೆ ನಡೆದಿದ್ದು, ಸರಣಿ ಅಪಘಾತದಲ್ಲಿ ಟಾಟಾ ಏಸ್ ಹಾಗೂ ಕ್ರೂಸರ್ ವಾಹನದಲ್ಲಿದ್ದ ಏಳು ಜನಕ್ಕೆ ಗಾಯವಾಗಿವೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಕ್ಷಣೆ ಮಾಡಿ ಅಂಬ್ಯುಲೆನ್ಸ ಸಹಾಯದೊಂದಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಓರ್ವ ಗಾಯಾಳುವನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಕೆಲಸ ಹಿನ್ನಲೆ ಹೆದ್ದಾರೊಯ ಮೇಲೆ ನಿಂತಿದ್ದ ಟಿಪ್ಪರ ಲಾರಿಗೆ ಹಿಂಬದಿಯಿಂದ ಕ್ರೂಸರ್ ವಾಹನ ಡಿಕ್ಕಿ, ಕ್ರೂಸರಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಈ ಸರಣಿ ಅಪಘಾತದಲ್ಲಿ 7 ಜನರಿಗೆ ಗಾಯವಾಗಿರೋ ಘಟನೆ ಧಾರವಾಡ ಹೊರವಲಯದ ನರೇಂದ್ರ ಮುಮ್ಮಿಗಟ್ಟಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಅಪಘಾತಗೊಂಡ ವಾಹನಗಳನ್ನು ಸರ್ವೀಸ್ ರಸ್ತೆಗೆ ಶಿಫ್ಟ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.