
ಬೆಳಗಾವಿ: ತಾಲೂಕಿನ ಶಿಂದೊಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರೆಯನ್ನು ವಿಜೃಂಭಣೆಯಿಂದ ಜರುಗಿಸುವುದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
15 ವರ್ಷಗಳ ನಂತರ ಶಿಂದೊಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆ ಜರುಗಲಿದ್ದು ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಾಹನ ದಟ್ಟಣೆಯನ್ನು ತಡೆಯಲು .ಗ್ರಾಮಕ್ಕೆ ಬರಲು ನಾಲ್ಕೈದು ರಸ್ತೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮಂಗಳವಾರದಂದು ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಇದೆ. ಹಿರೇಮಠದ ಸ್ವಾಮಿಗಳು ಇನ್ನಿತರ ಗಣ್ಯರು ಆಗಮಿಸುತ್ತಾರೆ ಸಕಲ ಸದ್ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿ ಜಾತ್ರಾ ಸಮಿತಿ ಮುಖಂಡರು ಇನ್ ನ್ಯೂಸ್ ಗೆ ಮಾಹಿತಿ ನೀಡಿದರು