Uncategorized

ಸಚಿವ ಲಾಡರಿಂದ ಅಂತು ಇಂತು ಕೊನೆಗೂ ಉದ್ಘಾಟನೆಯಾದ ಧಾರವಾಡ ಗಾಂಧಿ ಭವನ.

ಧಾರವಾಡದ ಹೊಸ ಬಸ್ ನಿಲ್ದಾಣದ ಹತ್ತಿರ ನಿರ್ಮಾಣವಾಗಿದ್ದ ಗಾಂಧಿ ಭವನವನ್ನು ಉದ್ಘಾಟನೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಲೋಕಾರ್ಪಣೆ ಮಾಡೊದರು.

ಇತ್ತೀಚೆಗಷ್ಟೇ ಧಾರವಾಡ ಗಾಂಧಿ ಭವನ‌ ಉದ್ಘಾಟನೆಗೆ ಆಹ್ರಹಿಸಿ‌ ಜನತೆ ಆಗ್ರಹಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇದರ ಫ್ರತಿಫಲವಾಗಿ ಕಳೆದ ದಿನ‌ ಸೋಮವಾರ ಧಾರವಾಡ ಭವ್ಯ ಗಾಂಧಿ ಭವನವು ಜಿಲ್ಲಾ ಉಸ್ತುವಾರಿ ಸಚಿವರಾ ಸಂತೋಷ ಲಾಡ್‌ರಿಂದ ಉದ್ಘಾಟನೆಗೊಂಡಿತ್ತು.

ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಉಸ್ತುವಾರಿ ಸಚಿವತಿಗೆ ಸಾಥ ನೀಡಿದರು. ಇನ್ನೂ ಲೋಕಾರ್ಪಣೆ ಬಳಿಕ ಭವನದಲ್ಲಿ ಬಿಡಿಸಲಾದ ಗಾಂಧೀಜಿ ಚಿತ್ರ, ಕಲಾಕೃತಿ ಹಾಗೂ ವಿವಿಧ ಮಾಹಿತಿ ಫಲಕಗಳನ್ನು ಕುತೂಹಲದಿಂದ ಲಾಡ್ ಅವರು ವೀಕ್ಷಿಸಿದರು. 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಭಾಷಣದಲ್ಲಿ ಪ್ರತಿ ಜಿಲ್ಲೆಯಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುವುದೆಂದು ಘೋಷಿಸಿದ್ದರು.

ಆ ಪ್ರಕಾರ ಧಾರವಾಡದ ಗುಲಗಂಜಿಕೊಪ್ಪದಲ್ಲಿ 29 ಗುಂಟೆ ಜಾಗದಲ್ಲಿ ಗಾಂಧಿಭವನ ನಿರ್ಮಾಣವಾಗಿತ್ತು. ಆದರೆ, ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದು ಭವನ ಉದ್ಘಾಟನೆಯಾಗದೆ ಹಾಗೇ ಉಳಿದಿತ್ತು. ಇದೀಗ ಸುಸಜ್ಜಿತ ಗಾಂಧಿ ಭವನ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅದನ್ನು ಲೋಕಾರ್ಪಣೆಗೊಳಿಸಿದ್ದಾರೆ. ಗಾಂಧೀಜಿ ಅವರ ವಿಚಾರಧಾರೆಗಳು, ಅವರು ನಡೆದು ಬಂದ ದಾರಿ, ಗಾಂಧೀಜಿ ಅವರ ತತ್ವಾದರ್ಶಗಳು ಭವನದಲ್ಲಿ ಅನಾವರಣಗೊಂಡಿದ್ದು, ವರ್ಷವಿಡೀ

ಈ ಭವನದಲ್ಲಿ ಗಾಂಧೀಜಿ ಅವರ ಕುರಿತಾದ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯ್ತಿ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಸಹ ಗಾಂಧಿಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Related Articles

Leave a Reply

Your email address will not be published. Required fields are marked *

Back to top button