
ಅಥಣಿ: ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪಾಟಿಲ ಮೊಹಮ್ಮದ್ ಪೈಗಂಬರ್ ಕುರಿತು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಉತ್ಸವದ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದು ರಾಜ್ಯಾದ್ಯಂತ ಮುಸ್ಲಿಮ ಸಮಾಜದ ಬಾಂಧವರು ಯತ್ನಾಳರನ್ನು ಬಂದಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು.
ಇಂದು ಅಥಣಿ ತಾಲೂಕಿನ ಅಂಜುಮನ್ ಏ ಇಸ್ಲಾಂ ಕಮೀಟಿ ಹಾಗೂ ಜಮೀಯತ್ ಏ ಉಲೇಮಾ ಹಿಂದ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಯಿತು. ಮುಸ್ಲಿಮ ಬಾಂಧವರು ತಮ್ಮ ಅಂಗಡಿ ಮುಂಗಡಗಳನ್ನು ಬಂದು ಮಾಡಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯೂ ಅಬ್ದುಲ ಕಲಾಂ ಆವರಣದಿಂದ ಶಾಂತ ರೀತಿಯಲ್ಲಿ ಜರಗುತ್ತ ಮುಖ್ಯ ಬೀದಿಯಿಂದ ನಡೆದು ಬಂದು ಶಿವಯೋಗಿ ವೃತ್ತದಲ್ಲಿ ಸಮಾವೇಶ ಗೊಂಡಿತು. ವಿಜಯಪುರ ಶಾಸಕ ಬಸನಗೌಡ ಯತ್ನಾಳ ಪಾಟಿಲರ ಮೇಲೆ ದೂರು ದಾಖಲಿಸಿ ಆದಷ್ಟು ಬೇಗ ಬಂದಿಸ ಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.