Uncategorized
ಬೆಳಗಾವಿ- ಬಾಗಲಕೋಟ ಜಿಲ್ಲೆಗಳ ಮಧ್ಯಮಾರ್ಗದಲ್ಲಿ ಕಂದಕಕ್ಕೆ ಉರುಳಿದ ಬಸ್ ; ಕೂದಲೇಳೆ ಅಂತರದಲ್ಲಿ ಪಾರಾದ ಜನರು

ಜಮಖಂಡಿ : ಬೆಳಗಾವಿ- ಬಾಗಲಕೋಟ ಜಿಲ್ಲೆಗಳ ಮಧ್ಯಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ. ಹಿಪ್ಪರಗಿ ಬ್ರಿಜ್ ನಿಂದ ಸ್ವಲ್ಪ ಅಂತರದಲ್ಲಿ ಏಕಾಏಕಿ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.ಹಿಪ್ಪರಗಿ ಬ್ರಿಜ್ ಪಕ್ಕದ ಕಂದಕಕ್ಕೆ ಆಯತಪ್ಪಿ ಬಸ್ ಪಲ್ಟಿಯಾಗಿದ್ದು ಭಾರಿ ಅನಾಹುತ ತಪ್ಪಿದೆ
ಬಾಗಲಕೋಟ ಜಿಲ್ಲೆ ಜಮಖಂಡಿ ಡಿಪೋಗೆ ಸೇರಿದ್ದ ಬಸ್ ನಲ್ಲಿ ಸುಮಾರು 56 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.ಈ ಅವಘಡದಲ್ಲಿ ಬಸ್ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೆ ಪ್ರಾಣ ಹಾನಿಗಳಾಗಿಲ್ಲ ಎಂದು ತಿಳಿದು ಬಂದಿದೆ.