
ವಿಜಯಪುರ: ನನಗೆ ಹಿಂದುತ್ವ ಉಳಿಸುವಂತೆ ನಿರ್ಣಯ ಮಾಡಬೇಕೆಂದು ಹೇಳುತ್ತಿದ್ದಾರೆ. ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ವಿಜಯ ದಶಮಿಯವರೆಗೂ ರಾಜ್ಯ ಸುತ್ತುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಕುರಿತು ಮಾತನಾಡಿದರು. ಕೇಂದ್ರದ ಸಚಿವರು ರಾಜ್ಯಾಧ್ಯಕ್ಷರಾಗ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಪಕ್ಷದಿಂದ ಉಚ್ಛಾಟನೆ ಯಾದ ಬಳಿಕ ಯಾರ ಸಂಪರ್ಕ ದಲ್ಲೂ ಇಲ್ಲ,
ಹಳ್ಳಿಗಳಲ್ಲಿ ಓಡಾಡುತ್ತಿದ್ದು, ಜನರಿಂದ ಉತ್ತಮ ಬೆಂಬಲ ದೊರಕುತ್ತಿದೆ ಎಂದರು. ಹಳ್ಳಿಗಳಲ್ಲಿ ನೂರಾರು ಜನರು ಸೇರುತ್ತಿದ್ದಾರೆ, ನನಗೆ ಹಿಂದುತ್ವ ಉಳಿಸುವಂತೆ ನಿರ್ಣಯ ಮಾಡಬೇಕೆಂದು ಹೇಳುತ್ತಿದ್ದಾರೆ. ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ವಿಜಯ ದಶಮಿಯವರೆಗೂ ರಾಜ್ಯ ಸುತ್ತುತ್ತೇನೆ. ನಾಳೆ ಹಾವೇರಿಯಲ್ಲಿ ಈಶ್ವರಪ್ಪ ಹಾಗೂ ನಾನು ಸಮಾವೇಶ ಮಾಡುತ್ತಿದ್ದೇವೆ. ಹಿಂದೂ ಯುವತಿಯರ ಮೇಲೆ ದೌರ್ಜನ್ಯವಾಗುತ್ತಿದೆ, ಅತ್ಯಾಚಾರ, ಲವ್ ಜಿಹಾದ್ ಇವೆಲ್ಲ ಖಂಡಿಸಿ ಸಮಾವೇಶ ಮಾಡುತ್ತೇವೆ ಎಂದರು. ಕಾಂಗ್ರೆಸ್ ಸರ್ಕಾರ ಹಿಂದೂಗಳ ರಕ್ಷಣೆ ಮಾಡಲಾಗುತ್ತಿಲ್ಲಾ, ಸರ್ಕಾರ ಒಂದೊಂದು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದರು. ಬಸವಾದಿ ಪ್ರಮುಖರೆಂದು ಹೇಳಿ ವಿಭೂತಿ ಹಾಗೂ ಲಿಂಗವನ್ನೂ ತೆಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದು ಹಿಂದೂ ವಿರೋಧಿ ಸರ್ಕಾರವಾಗಿದೆ.
ಈ ಸರ್ಕಾರವನ್ನು ಎದುರಿಸಲು ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಾಮರ್ಥ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸಂಪೂರ್ಣ ವಿಫಲವೆಂದು ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ಪಕ್ಷದಲ್ಲಿ ಭೀನ್ನಾಭಿಪ್ರಾಯವಿಲ್ಲ. ಜನಾಕ್ರೋಶ ಯಾತ್ರೆಗೆ ಆರ್ ಅಶೋಕ, ಅಶ್ವಥ್ ನಾರಾಯಣ ಬಂದಿಲ್ಲ. ಶ್ರೀರಾಮುಲು ಮಾತ್ರ ಕಾಟಾಚಾರಕ್ಕೆ ಬರುತ್ತಾರೆ. ವಿಜಯೇಂದ್ರ ಮೇಲೆ ಎಲ್ಲರಿಗೂ ಬೇಸರವಿದೆ ಎಂದರು.ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ಕುರಿತು ವ್ಯಂಗ್ಯವಾಡಿದ ಅವರು, ಇದು ಬಿಎಸ್‌ವೈ ಕುಟುಂಬದ ವೈಭವಿಕರಣದ ಯಾತ್ರೆ. ವಿಜಯೇಂದ್ರ 60 ವಾಹನಗಳನ್ನ ತೆಗೆದುಕೊಂಡು ಅಡ್ಡಾಡ್ತಿದ್ದಾನೆ. ದಾವಣಗೇರಿಯಲ್ಲಿ 60 ವಾಹನಗಳ ಸಮೇತ ಅಡ್ಡಾಡಿದ್ದಾನೆ
ಆದರೆ ಎಲ್ಲಿಯೂ ಸಾವಿರಕ್ಕಿಂತ ಹೆಚ್ಚು ಜನ ಸೇರುವುದಿಲ್ಲ. ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ವೇಳೆ ಜನ ಇರಲಿಲ್ಲ ಎಂದರು. 5 ಸಾವಿರ ಕೆಪಾಸಿಟಿ ಗ್ರೌಂಡಲ್ಲಿ ಶೇ. 25 ರಷ್ಟು ಚೇರ್ ಇರಲಿಲ್ಲ. ನನ್ನ ಉಚ್ಚಾಟನೆಯ ಆಕ್ರೋಶ ಕಡಿಮೆ ಮಾಡಲು ಈ ಯಾತ್ರೆ ಮಾಡಲಾಗುತ್ತಿದೆ. ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ, ಭ್ರಷ್ಟಾಚಾರದ ವಿರುದ್ಧ ಅಲ್ಲ. ಆ ಕುಟುಂಬವನ್ನ ಯಾರೂ ಒಪ್ಪುವುದಿಲ್ಲ. ವಿಜಯೇಂದ್ರ ಭಯದಲ್ಲಿ ಇದ್ದಾನೆ, ತಮಿಳುನಾಡು ಅಧ್ಯಕ್ಷರನ್ನು ತೆಗೆದಂತೆ ತನ್ನನ್ನು ತೆಗೆಯುತ್ತಾರೆ ಎಂದು ಭಯಪಡುತ್ತಿದ್ದಾರೆ ಎಂದರು.