ಮಾನಹಾನಿ ಕೇಸ್ ಹಾಕಲು ನಿರ್ಧರಿಸಿದ ಶಾಸಕ ಯತ್ನಾಳ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಗ್ಗೋಡದ ಗೋ ಶಾಲೆಯ ದನಗಳನ್ನು ಬೇರೆಡೆ ಸಾಗಾಟ ಮಾಡಲಾಗ್ತಿದೆ ಎಂಬ ಮುಸ್ಲಿಂ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾನಹಾನಿ ಕೇಸ್ ಹಾಕಲಾಗುತ್ತದೆ. ಸಿದ್ದೇಶ್ವರ ಸಂಸ್ಥೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದೇವೆ. ಪತ್ರಿಕಾಗೋಷ್ಠಿಯಲ್ಲಿ ಇದ್ದವರು ಎಲ್ಲರ ಮೇಲೆ ಮಾನಹಾನಿ ಕೇಸ್ ಹಾಕಲಾಗುತ್ತದೆ.
ದಾಖಲೆ ಇಲ್ಲದೇ ಆರೋಪ ಮಾಡಿದ್ದಾರೆ. ಅವರು ಹಿಂದೂ ಸಮಾಜಕ್ಕೆ ಕ್ಷಮೆಯಾಚಿಸಬೇಕು ಎಂದರು. ಏಪ್ರಿಲ್ 28 ರಂದು ಶಾಸಕ ಯತ್ನಾಳ ವಿರುದ್ಧ ಮುಸ್ಲಿಂ ಮುಖಂಡರಿಂದ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಹೋರಾಟದಿಂದ ಏನಾದರೂ ಹಿಂದೂಗಳ ವಸ್ತುಗಳು ಹಾನಿಯಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ. ಅವರು 1 ಲಕ್ಷ ಜನ ಸೇರಿಸುತ್ತೇವೆ ಎನ್ನುತ್ತಾರೆ, ನಾವು 10 ಲಕ್ಷ ಜನ ಸೇರಿಸಬೇಕಾಗುತ್ತದೆ. ಪೋಲಿಸ್ ಇಲಾಖೆ ಅವರು ಅನುಮತಿ ನೀಡಲು ಬಾಂಡ್ ಬರೆಸಿ ಕೊಳ್ಳಬೇಕು. ಪ್ರಜಾತಂತ್ರದಲ್ಲಿ ಹೋರಾಟ ಮಾಡಲಿ, ಗುಂಡಾಗಿರಿ, ಕೊಲೆ, ಸುಡ್ತೀನಿ ಎಂದರೆ ಹಿಂದೂಗಳು ತಯಾರಿದ್ದಾರೆ. ನಾವು ಎದುರಿಸುತ್ತೇವೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.