ಕೃಷಿ ಹೊಂಡಕ್ಕೆ ಈಜಲು ಹೋಗಿ ಇಬ್ಬರು ಬಾಲಕರು ದಾರುಣ ಸಾವು…

ಧಾರವಾಡ: ಕೃಷಿ ಹೊಂಡಕ್ಕೆ ಈಜಲು ತೆರಳಿದ್ದ ಇಬ್ಬರು ಬಾಲಕರು ದಾರುಣವಾಗಿ ಸಾವನಪ್ಪಿದ ಹೃದಯ ವಿದ್ರವಾಕ ಘಟನೆ ಧಾರವಾಡ ಜಿಲ್ಲೆಯ ಗಾಮನಗಟ್ಟಿ ಗ್ರಾಮದಲ್ಲಿಂದ ಮಧ್ಯಾಹ್ನ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದ ಹೊರವಲಯದ ಕೆರೆಯ ಬಳಿ ಕೃಷಿ ಹೋಡದಲ್ಲಿ ಈ ದುರ್ಘಟನೆ ನಡೆದಿದೆ. ಗಾಮನಗಟ್ಟಿ ಗ್ರಾಮದ ಜೀವನ್ ಮೇದಾರ (10), ಧಾರವಾಡ ತಾಲೂಕಿನ ತಡಸಿನಕೊಪ್ಪದ ನಿವಾಸಿ ಪ್ರವೀಣ್ ಲೋಕುರ (12) ಮೃತ ದುರ್ದೈವಿಗಳಾಗಿದ್ದಾರೆ. ಆಟ ಆಡಲು ಹೋಗುವುದಾಗಿ ಕುಟುಬಸ್ಥರಿಗೆ ತಿಳಿಸಿ ಹೋಗಿದ್ದರಂತೆ, ಮೂವರ ಬಾಲಕರು ಕೂಡಿಕೊಂಡು ಕೃಷಿ ಹೊಂಡಕ್ಕೆ ಈಜಲು ಹೋಗಿದ್ದಾರೆ. ಈ ವೇಳೆ ಮೃತರಿಬ್ಬರು ಹೊಂಡದಲ್ಲಿ ಇಳಿದಿದ್ದು, ಇಬ್ಬರು ನೀರಿನಲ್ಲಿ ಕಾಣದ ಹಿನ್ನಲೆಯಲ್ಲಿ ಇವರ ಜೊತೆ ಹೋಗಿದ್ದ ಇನ್ನೊಬ್ಬ ಬಾಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಇಬ್ಬರು ಬಾಲಕರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟೋತ್ತಿಗಾಗ್ಲೆ ಬಾಲಕರಿಬ್ಬರು ಪ್ರಾಣ ಪಕ್ಷಿ ಹಾರಿಹೋಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಕಿಮ್ಸ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ನವನಗರ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ