ಹೊಸ ವರ್ಷದ ಆಚರಣೆಗೆ ಅಲರ್ಟ್ ಆದ ಖಾಕಿ; 600 ಮಾದಕ ವ್ಯಸನಿಗಳಿಗೆ ಪರೇಡ್ ಕಮಿಷನರ್ ವಾರ್ನಿಂಗ್

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ ಹೀಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ದ್ರಷ್ಟಿಯಿಂದ ಶಾಂತಿಯುತವಾಗಿ ಹೊಸ ವರ್ಷ ಆಚರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಧಕ ವಸ್ತುಗಳ ಸೇವನೆ ಮಾಡುತ್ತಿದ್ದ 600 ಕ್ಕೂ ಹೆಚ್ಚು ಮಾದಕ ವ್ಯಸನಿಗಳನ್ನ ಪರೇಡ್ ನಡೆಸಲಾಯಿತು.
ಹಳೇ ಸಿ ಆರ್ ಮೈದಾನದಲ್ಲಿ ಅವಳಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಿ ಪೊಲೀಸರ ಕೈಗೆ ಸಿಕ್ಕಾಕಿಕೊಂಡು ಪ್ರಕರಣ ದಾಖಲಾಗಿರುವ 600 ಜನರನ್ನು ಕರೆ ತಂದು ಈ ಸಾರಿಯ ಹೊಸ ವರ್ಷದ ಆಚರಣೆಯಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡದಂತೆ ಕಮಿಷನರ್ ಎನ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಅವಳಿ ನಗರದಲ್ಲಿ ಡ್ರಗ್ಸ್ ನಿಯಂತ್ರಣ ಮಾಡುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗಿತ್ತು,ಅದೇ ರೀತಿ ಕೂಡ ಮುಂದುವರೆದ ಭಾಗವಾಗಿ 600 ಕ್ಕೂ ಹೆಚ್ಚು ಡ್ರಗ್ಸ್ ಸೇವನೆ ಮಾಡುವ ವ್ಯಸನಿಗಳಿಗೆ ಬುದ್ದಿ ಹೇಳುವುದರ,ಮತ್ತೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಯಿತು.