
ಬೆಳಗಾವಿ : ಬೆಳಗಾವಿಯ ಕೆಎಲ್ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಯಿ ಔಷಧ ಮತ್ತು ವಿಕಿರಣ ಶಾಸ್ತ್ರ ದಿನಾಚರಣೆ ಅಂಗವಾಗಿ ಗುರುವಾರ ಬಾಯಿ ರೋಗ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು
ಕೆಎಲ್ಇ ದಂತ ಮಹಾವಿದ್ಯಾಲಯದ ಬಾಯಿ ಔಷಧ ಮತ್ತು ವಿಕಿರಣ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಈ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕೆಎಲ್ಇ ಡಾ.ಸಂಪತಕುಮಾರ್ ಶಿವಾಂಗಿ ಕ್ಯಾನ್ಸರ್ ಆಸ್ಪತ್ರೆಯ ಡಾ.ರೇಣುಕಾ ಅಮ್ಮಣಗಿ ವಿಶೇಷ ಉಪನ್ಯಾಸ ನೀಡಿದರು. ತಜ್ಞ ವೈದ್ಯರಾದ ಡಾ ಶಿವಯೋಗಿ,ಡಾ. ದಾನೆಶ್ವರಿ, ಡಾ ನಮೃತಾ ಮತ್ತು ಡಾ. ಜಮೀರಾ ಅವರು ಬಾಯಿಯ ಲೋಳೆಪೊರೆ, ಪೂರ್ವ ಗಾಯಗಳ ಗುರುತಿಸುವಿಕೆ ಹಾಗೂ ನಿರ್ವಹಣೆ ಕುರಿತು ಮತ್ತು ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಗ್ಯ ಅಧಿಕಾರಿಗಳು ಹಾಗೂ ದಂತ ಚಿಕಿತ್ಸೆಕರಿಗೆ ಡಾ.ಅರವಿಂದ ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಡಾ.ಅಲ್ಕಾ ಕಾಳೆ, ಡಾ.ವಾಸಂತಿ, ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಧ್ಯಾಪಕರು, ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ದಂತ ಆರೋಗ್ಯ ಅಧಿಕಾರಿಗಳು, ಕೆಎಲ್ಇ ಉಪಗ್ರಹ ಕೇಂದ್ರದ ದಂತ ಶಸ್ತ್ರಚಿಕಿತ್ಸಕರು ಇನ್ನಿತರರು ಉಪಸ್ಥಿತರಿದ್ದರು.ಡಾ ವೈಶಾಲಿ ಕೇಲು ಸ್ವಾಗತಿಸಿದರು,ಡಾ. ಆರತಿ ವಂದಿಸಿದರು.