ಮಳೆ ಗಾಳಿಗೆ ಮನೆಯ ಪಾತ್ರಾಸ್ ಶೀತಲ; ಮಳೆಯ ಆವಾಂತರದಿಂದ ಬೀದಿ ಪಾಲಾದ ಕುಟುಂಬ.

ರಾಯಬಾಗ: ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು ಶೀತಲಗೊಂಡಿದ್ದು, ಕಡು ಬಡತನದ ಕುಟುಂಬವೊಂದು ಬೀದಿ ಪಾಲಾದ ಘಟನೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸಾಮನೆ ತೋಟದಲ್ಲಿ ಸಂಭವಿಸಿದೆ.
ಹಿಡಕಲ್ ಗ್ರಾಮದ ನಿವಾಸಿ ಪ್ರವೀಣ ಮಾಂಗ ಎಂಬುವವರು ತಮ್ಮ 6 ಗುಂಟೆ ಭೂಮಿಯಲ್ಲಿ ಸರಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಕೊಂಡು ಹೆಂಡತಿ ಹಾಗು ಇಬ್ಬರು ಮಕ್ಕಳೋಡನೆ ಜೀವನ ಸಾಗಿಸುತಿದ್ದರು. ಆದರೆ ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು ಶೀತಲಗೊಂಡಿದ್ದು, ಬದುಕು ಬೀದೀಪಾಲಾಗಿದೆ. ಮಕ್ಕಳ ಪುಸ್ತಕ ಹಾಗು ಮನೆಯಲ್ಲಿ ಸಂಗ್ರಹಿಸಿದ್ದ 10 ಕ್ವಿಂಟಲ್ ದವಸ ದಾನ್ಯಗಳು ಮಳೆಯಲ್ಲಿ ತೊಯ್ದು ಹೋಗಿದ್ದು ಪಕ್ಕದ ಮನೆಯಲ್ಲಿ ಶೇಖರಣೆ ಮಾಡಿ ಇಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇಲ್ಲಿಯವರೆಗೆ ಈ ರೀತಿ ಘಟನೆಗಳಿಗೆ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಬೇಕಿದ್ರೆ ಒಂದು ಫೋಟೋ ತಗೊಂಡು ಹೋಗುತ್ತೇವೆ. ಅಬ್ಬಬಾ ಅಂದ್ರೆ 25 ಸಾವಿರ ಪರಿಹಾರ ಸಿಗಬಹುದು ಅದರರ್ಧ ನೀನು ನಮಗೆ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿರುವುದು ಖಂಡನೀಯ. ಸ್ಥಳೀಯ ಆಡಳಿತ ಮಂಡಳಿ ಹಾಗು ರಾಯಬಾಗ ತಹಸೀಲ್ದಾರ್ ಅವರು ಈ ನಿರಾಶ್ರಿತ ಕುಟುಂಬಕ್ಕೆ ಆಶ್ರಯ ನೀಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.