
ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಭಾರತ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗಿ
ಇವತ್ತಿನ ದಿನ ಖಾನಾಪೂರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿಗಳಾದ “ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್” ಅವರು ತೆಲಂಗಾಣ ಸರ್ಕಾರದ ವತಿಯಿಂದ ಏರ್ಪಡಿಸಲಾದ “”ಭಾರತ್ ಸಮ್ಮಿಟ್”” ನಲ್ಲಿ “”ಜೆಂಡರ್ ಜಸ್ಟಿಸ್”” ಈ ವಿಷಯದ ಕುರಿತು ಮಾತನಾಡಲು ಆಹ್ವಾನಿಸಲಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತೆಲಂಗಾಣ ಸರ್ಕಾರವು ತೆಲಂಗಾಣದ ಹೈದರಾಬಾದ್ನಲ್ಲಿ “”ಭಾರತ್ ಸಮ್ಮಿಟ್””ಯನ್ನು ಆಯೋಜಿಸಿದೆ, ಜಗತ್ತಿನ 95 ದೇಶಗಳಿಂದ 300 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಅವರಲ್ಲಿ 5 ಮಹಿಳೆಯರು ಭಾಷಣ ಮಾಡಲಿದ್ದು, ಅವರಲ್ಲಿ ಖಾನಾಪೂರದ ಮಾಜಿ ಶಾಸಕಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರಿಗೆ ಈ ಗೌರವ ಸಂದಿದೆ.
ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಐದು ಮಹಿಳೆಯರನ್ನು “”ಜೆಂಡರ್ ಜಸ್ಟಿಸ್”” ಕುರಿತು ಮಾತನಾಡಲು ಅವಕಾಶವನ್ನು ಹೊಂದಿರುತ್ತಾರೆ, ಅವರಲ್ಲಿ ಜಾರ್ಖಂಡ್ ಸಚಿವೆ ದೀಪಿಕಾ ಪಾಂಡೆ, ಮಹಾರಾಷ್ಟ್ರ ಸಂಸದೆ ಪ್ರಣಿತ್ ಶಿಂಧೆ ಮತ್ತು ಮಾಜಿ ಸಚಿವೆ ಯಶೋಮತಿ ಠಾಕೂರ್, ಮಹಿಳಾ ಸಂಸದೆ ಜೋತಿಮಣಿ ಮತ್ತು ಖಾನಾಪೂರದ ಮಾಜಿ ಶಾಸಕಿ ಡಾ. ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಸೇರಿದ್ದಾರೆ.
ದೇಶದಿಂದ ಕೇವಲ 5 ಮಹಿಳೆಯರು ಮಾತ್ರ ಈ ಗೌರವವನ್ನು ಪಡೆದಿದ್ದು, ಭಾರತ್ ಶೃಂಗಸಭೆ ಕಾರ್ಯಕ್ರಮವು ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಹೈದರಾಬಾದ್ ನಲ್ಲಿ ನಡೆಯಲಿದೆ.