ಬೈಲ್ ಹೊಂಗಲ್
ದೊಡ್ಡವಾಡ ಗ್ರಾಮದಲ್ಲಿ ಮತ್ತೆ ಬಣವಿಗಳಿಗೆ ಬೆಂಕಿ .

ಬೈಲಹೊಂಗಲ: ತಾಲೂಕಿನ ದೊಡ್ಡವಾಡ ಗ್ರಾಮದ ಕರಿಕಟ್ಟಿ ರಸ್ತೆ ಪಕ್ಕದ ಹೊಲದಲ್ಲಿ ರೈತರು ಒಟ್ಟಿರುವ ಒಂದು ಹೊಟ್ಟಿನ ಮತ್ತು ಇನ್ನೊಂದು ಕಣಕಿ ಬಣವಿಗೆ ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿವೆ.
ಬೈಲಹೊಂಗಲ ಅಗ್ನಿಶಾಮಕ ದಳದವರಿಗೆ ರೈತರು ಕರೆ ಮಾಡಿ ಮಾಹಿತಿ ನೀಡಿದ್ದು ಅಗ್ನಿಶಾಮಕ ಸಿಬ್ಬಂದಿ ವಾಹದೊಂದಿಗೆ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ
ಗ್ರಾಮದ ರೈತ ಮಹದೇವಪ್ಪ ಮಲ್ಲೇಶಪ್ಪ ಹಾಲಣ್ಣವರ ಅವತ್ತಿಗೆ ಸೇರಿದ ಬಣವೆಗಳು ಇವಾಗಿವೆ.
ಹೊತ್ತಿ ಉರಿಯುತ್ತಿರುವ ಬನಣವೆಗಳ ಬಳಿ ಮತ್ತೊಂದು ದೊಡ್ಡ ಹೊಟ್ಟಿನ ಬಣವೇ ಇದ್ದು ಅದಕ್ಕೂ ಬೆಂಕಿ ತಗುಕುವ ಸಾಧ್ಯತೆಯಿಂದ ರೈತರು ಅದಕ್ಕೆ ತಾಡಪಾಲು ಗುಡಾರ್ ಹೊಚ್ಚಿ ರಕ್ಷಿಸಲು ಹರ ಸಾಹಸ ಪಡುತ್ತಿದ್ದಾರೆ
ದನ ಕರುಗಳ ಹಸಿವು ನೀಗಿಸುವ ಬಣವೆಗಳು ಪದೆ ಪದೆ ಬೆಂಕಿಗಾಹುತಿಯಾಗುತ್ತಿರುವುದು ದೊಡವಾಡ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ