ಕುಡಿಯುವ ನೀರಿನ ಸಮಸ್ಯೆ ಗ್ರಾಮ ಪಂಚಾಯತ ಮುಂದೆ ಮಹಿಳೆಯರ ಪ್ರತಿಭಟನೆ.

ತಾಳಿಕೋಟೆ:ಬ ಸಾಲೋಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೇಬಾವಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕೆಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಹಿಳೆಯರು ಗ್ರಾಮ ಪಂಚಾಯತ ಕಾರ್ಯಾಲಯ ಮುಂದೆ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಹಿರಿಯ ಮೇಲಾಧಿಕಾರಿಗಳು ಸಭೆ ನಡೆಸಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಎಂದು ಭಾಷಣ ಮಾಡುತ್ತಾರೆ ಆದರೆ ವಾಸ್ತವದಲ್ಲಿ ಗ್ರಾಮೀಣ ಪ್ರದೇಶದ ಜನರ ನೀರಿನ ಸಮಸ್ಯೆ ತಾಲೂಕ ಮಟ್ಟದ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿ ಕಳಪೆ ಆಗಿದೆ.ಹೆಸರಿಗೆ ಮಾತ್ರ ಮನೆಯ ಮುಂದೆ ನಳ ಒಂದು ಹನಿ ನೀರು ಬರದ ಹಿನ್ನಲೆ ಎರಡು ಕಿಲೋ ಮೀಟರ ಅಲೇದು ಫಿಲ್ಟರ ನೀರು ತಂದು ಕುಡಿಯುವ ಪರಿಸ್ಥಿತಿ ಉಂಟಾಗಿದೆ.ಈ ಕುರಿತು ಗ್ರಾಮ ಪಂಚಾಯತ ಹಾಗೂ ತಾಲೂಕ ಪಂಚಾಯಿತ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ನೀಡಿದರು ಸಹ ಗ್ರಾಮಕ್ಕೆ ಒಂದು ಬಾರಿಯೂ ಅಧಿಕಾರಿಗಳು ವೀಕ್ಷಣೆಗೆ ಬರಲಿಲ್ಲ ಎಂದು ತಿಳಿಸಿದರು.
ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳುಕುಂಟಿತವಾಗಿವೆ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ಬಗ್ಗೆ ಹಲವಾರು ಬಾರಿ ಮನವಿ ನೀಡಿದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಆಲಿಸಲಿಲ್ಲ. ಗ್ರಾಮ ಪಂಚಾಯಿತಿಗೆ ಮೂರ್ನಾಲ್ಕು ಬಾರಿ ಕಚೇರಿ ವೇಳೆಗೆ ಗ್ರಾಮದ ಮಹಿಳೆಯರ ಸೇರಿ ಗ್ರಾಮ ಪಂಚಾಯತ ಬಂದರು ಸಹ ಪಿ.ಡಿ.ಓ ಕಾರ್ಯಾಲಯದಲ್ಲಿ ಸಿಗುವದಿಲ್ಲ ಎಂದು ಯುವ ಮುಖಂಡ ಭಾಗಣ್ಣ ಬರೇದನಾಳ ತಿಳಿಸಿದರು.
ಈ ಬಗ್ಗೆ ಕ್ಷೇತ್ರದ ಶಾಸಕರು ಲಕ್ಷ ವಹಿಸಿ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎನ್ನುವದು ಮಹಿಳೆಯರ ಬೇಡಿಕೆಯಾಗಿದೆ.
ಈ ಸಮಯದಲ್ಲಿ ರೇಣುಕಾ ನಂದ್ಯಾಳ, ದೇವಮ್ಮ ಪ್ಯಾಟಿ,ನೀಲಮ್ಮ ಬಾಕಲಿ,ಶರಣಮ್ಮ ಅಮ್ಮಾಪುರ,ಶಾಂತಮ್ಮ ಕೇಸಾಪುರ,ಹಣಮ್ಮ್ ನಂದ್ಯಾಳ,ಮುದ್ಕವ್ವ ಮಸ್ಕಾನಾಳ,ರೇಣುಕಾ ಬಾವುರ,ಅನಸುಬಾಯಿ ಪಡೆಕಲ,ಶರಣಮ್ಮ ಕೇಸಾಪುರ, ನೀಲಮ್ಮ ಪೂಜಾರಿ,ಬಸಮ್ಮ ಪೂಜಾರಿ,ರೇಣುಕಾ ಯನ್ಮಾಡಿ, ಸವಿತಾ ಯನ್ಮಾಡಿ, ಬಸಮ್ಮ ಯನ್ಮಾಡಿ,ಪಾರ್ವತಿ ವಾಲಿಕಾರ ಹಲವರು ಉಪಸ್ಥಿತರಿದ್ದರು.