ಬೆಳಗಾವಿ

2ನೇ ರಾಷ್ಟ್ರೀಯ ಓಪನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್’ನಲ್ಲಿ ಮಿಂಚಿದ ಬೆಳಗಾವಿ ಸ್ಕೇಟರ್‌ಗಳು.

 ಬೆಳಗಾವಿ :2ನೇ ರಾಷ್ಟ್ರೀಯ ಓಪನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್’ನಲ್ಲಿ ಮಿಂಚಿದ ಬೆಳಗಾವಿ ಸ್ಕೇಟರ್‌ಗಳು 1 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ 2 ನೇ ಓಪನ್ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2025 ಅನ್ನು ಆಯೋಜಿಸಲಾಗಿತ್ತು. ಈ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳು ಮೊಹಾಲಿ ಮತ್ತು ಚಂಡೀಗಢದಲ್ಲಿ ನಡೆದವು.

ಈ ಚಾಂಪಿಯನ್‌ಶಿಪ್‌ನಲ್ಲಿ 28 ರಾಜ್ಯಗಳಿಂದ 1400ಕ್ಕೂ ಹೆಚ್ಚು ಸ್ಕೇಟರ್‌ಗಳು ಭಾಗವಹಿಸಿದ್ದರು. ಬೆಳಗಾವಿಯ ಸ್ಕೇಟರ್‌ಗಳು 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಫ್ರೀ ಸ್ಟೈಲ್ ಸ್ಕೇಟಿಂಗ್ ಹಿರೇನ್ ರಾಜ್ 1 ಬೆಳ್ಳಿ, ಮತ್ತು ದೇವೆನ್ ಬಾಮಣೆ 1 ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಕೆಎಲ್‌ಇ ಸ್ಕೇಟಿಂಗ್‌ ರಿಂಕ್‌ ಮತ್ತು ಗುಡ್‌ ಶೆಫರ್ಡ್‌ ಸ್ಕೇಟಿಂಗ್‌ ರಿಂಕ್‌ ಶಿವಗಂಗಾ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಸ್ಕೇಟಿಂಗ್‌ ತರಬೇತುದಾರರಾದ ಸೂರ್ಯಕಾಂತ್‌ ಹಿಂಡಲಗೇಕರ, ಮಂಜುನಾಥ ಮಂಡೋಳ್ಕರ್‌ ಯೋಗೀಶ್‌ ಕುಲಕರ್ಣಿ, ವಿಶಾಲ ವೇಸನೆ, ವಿಠ್ಠಲ್‌ ಗಗನೆ ಮತ್ತು ವಿಶ್ವನಾಥ್‌ ಮಾರ್ಗದರ್ಶನ ದೊರೆತಿದೆ.

Related Articles

Leave a Reply

Your email address will not be published. Required fields are marked *

Back to top button