Uncategorized
ವಿದ್ಯುತ್ ಸಮಸ್ಯೆಗಳ ಬಗ್ಗೆ ಸಭೆ ಏರ್ಪಡಿಸಿದ ಸಂತೋಷ್ ಲಾಡ್.

ಧಾರವಾಡ: ಜಿಲ್ಲಾ ಪ್ರವಾಸದಲ್ಲಿರುವ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ರವರು ಇಂದು ಹುಬ್ಬಳ್ಳಿಯ ನವನಗರದಲ್ಲಿರುವ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಕಲಘಟಗಿ ಮತಕ್ಷೇತ್ರಕ್ಕೆ ಸಂಭಂದಿಸಿದಂತೆ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಡನೆ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಭೆ ಏರ್ಪಡಿಸಿ ಚರ್ಚಿಸಿದರು.
ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು, ಹೆಸ್ಕಾಂ ಅಧ್ಯಕ್ಷರಾದ ಅಜ್ಜಂಪಿರ್ ಖಾದ್ರಿ, ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ, ಪ್ರಧಾನ ವ್ಯವಸ್ಥಾಪಕರಾದ (ತಾಂತ್ರಿಕ) ಶ್ರೀ ವಿನಾಯಕ ಪಾಲಂಕರ್ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.