ಬೆಳಗಾವಿ

ಬೆಳಗಾವಿಯಲ್ಲಿ 600 ವರ್ಷದ ಹಿಂದಿನ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ; ಬೆಳಗಾವಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ

ಬೆಳಗಾವಿ: ರೋಟರಿ ಕ್ಲಬ್ ಆಫ್ ವೇಣುಗ್ರಾಮ, ರೋಟ್ರ್ಯಾಕ್ಟ್ ಕ್ಲಬ್ ಆಫ್ ವೇಣುಗ್ರಾಮ ಮತ್ತು ಬಿರ್ಲಾ ಇಂಟರನ್ಯಾಷನಲ್ ಸ್ಕೂಲನ ಸಂಯುಕ್ತಾಶ್ರಯದಲ್ಲಿ ರೋಟೆರಿಯನ್ ಅರುಣ ಕಾಮುಲೆ ಅವರು ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಬೆಳಗಾವಿಯ ಹಿಂದವಾಡಿಯಲ್ಲಿರುವ ಮಹಾವೀರ ಭವನದಲ್ಲಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ, ರೋಟ್ರ್ಯಾಕ್ಟ್ ಕ್ಲಬ್ ಆಫ್ ವೇಣುಗ್ರಾಮ ಮತ್ತು ಬಿರ್ಲಾ ಇಂಟರನ್ಯಾಷನಲ್ ಸ್ಕೂಲನ ಸಂಯುಕ್ತಾಶ್ರಯದಲ್ಲಿ ರೋಟೆರಿಯನ್ ಅರುಣ ಕಾಮುಲೆ ಅವರು ಸಂಗ್ರಹಿಸಿದ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದಕ್ಕೆ ಬೆಳಗಾವಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಕುರಿತು  ಮಾಹಿತಿ ನೀಡಿದ ರೋಟೆರಿಯನ್ ಅರುಣ ಕಾಮುಲೆ ಅವರು ಕಳೆದ 65 ವರ್ಷಗಳಿಂದ ನಾಣ್ಯ ಮತ್ತು ಸ್ಟ್ಯಾಂಪಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು, 600 ವರ್ಷದ ಹಿಂದಿನ ನಾಣ್ಯಗಳಿಂದ ಇಲ್ಲಿಯ ವರೆಗಿನ ಎಲ್ಲ ತರಹದ ನಾಣ್ಯಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಬೆಂಡಬಾರ್, ಮಶಕ್, ಪಂಚಮಾರ್, ಕುಶಾನ್, ಚಂದ್ರಗುಪ್ತ ಮೌರ್ಯ ಸೇರಿದಂತೆ ರಾಜರಕಾಲದ ನಾಣ್ಯಗಳು ಇಲ್ಲಿವೆ ಎಂದರು.

ಬೆಳಗಾವಿಯ ಹೊರಗೆ ಈ ಹವ್ಯಾಸ ಹೆಚ್ಚಾಗಿದೆ. ಇಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಕಾಲದ ಮತ್ತು ಬ್ರಿಟಿಷರ ಕಾಲದ ನಾಣ್ಯಗಳು ಕಾಣಸಿಕ್ಕವು. ತಾವೂ ಕೂಡ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿರುವುದಾಗಿ ನೀರಜ್ ಕಾವಳೆ ತಿಳಿಸಿದರು.  ತನ್ನ ಚಿಕ್ಕ ಮಗುವನ್ನು ಪ್ರದರ್ಶನಕ್ಕೆ ಕರೆ ತಂದ ತಾಯಿಯೂ ಚಿಕ್ಕಮಕ್ಕಳು ಮತ್ತು ನಾವು ಕಾಣದ ನಾಣ್ಯಗಳನ್ನು ಇಲ್ಲಿ ಕಂಡು ಸಂತಸವೆನಿಸಿತು ಎಂದರು.

Related Articles

Leave a Reply

Your email address will not be published. Required fields are marked *

Back to top button