ಬೆಳಗಾವಿರಾಜಕೀಯರಾಜ್ಯ

ಬೆಳಗಾವಿಯಲ್ಲಿ ರ್ಯಾಪಿಡೋ ಬೈಕ್ ವಿರುದ್ಧ ತಿರುಗಿ ಬಿದ್ದ ಆಟೋ ಚಾಲಕರು.

ಬೆಳಗಾವಿ:  ರಾಣಿ ಚನ್ನಮ್ಮ ವೃತ್ತದಲ್ಲಿ ರ್ಯಾಪಿಡೋ ವರ್ಸಸ್ ಆಟೋ ಚಾಲಕರ ಜಪಾಪಟಿ ನಡೆದು ಹೋಗಿದೆ. ಮೊದಲೇ ಶಕ್ತಿ ಯೋಜನೆ ರಿಕ್ಷಾ ಚಾಲಕರ ಶಕ್ತಿ ಕುಂದಿಸಿದ್ದು, ಬೆಳಗಾವಿ ನಗರದಲ್ಲಿ ರ್ಯಾಪಿಡೋ ಬೈಕ್ ಸರ್ವಿಸ್ ಬೇಡ ಎಂದಿದ್ದಾರೆ.

ಹೌದು, ಬೆಳಗಾವಿ ನಗರದಲ್ಲಿ ನೂತನವಾಗಿ ರ್ಯಾಪಿಡೋ ಬೈಕ್ ಸರ್ವಿಸ್ ಕಾಲಿಟ್ಟಿದ್ದಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರ್ಯಾಪಿಡೋ ವರ್ಸಸ್ ಆಟೋ ಚಾಲಕರ ಜಪಾಪಟಿ ನಡೆದು ಹೋಗಿದೆ.

ಸ್ಥಳಕ್ಕೆ ಬಂದ ಪೊಲೀಸರೊಂದಿಗೂ ಸಹ ಆಟೋ ಚಾಲಕರ ವಾಗ್ವಾದ ನಡೆಸಿದ್ದಾರೆ. ರ್ಯಾಪಿಡೋ ಬೈಕ್ ಫೋಟೊ ಹಾಗೂ ತಾವೇ ಬುಕ್ ಮಾಡಿದ ಬೈಕ್ ಕೀ ಹಿಡಿದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಗೆ ಕಂತು ಕಟ್ಟುವುದು ಹೇಗೆ? ಹೊಟ್ಟೆಗೆ ತಿನ್ನುವುದು ಹೇಗೆ? ಬೆಳಗಾವಿ ಪರ್ಯಟನ ಸ್ಥಳವಲ್ಲ. ಇಲ್ಲಿ ರ್ಯಾಪಿಡೋ ಅಗತ್ಯತೆಯಿಲ್ಲ. ಅಲ್ಲದೇ, ಹೆಣ್ಣು ಮಕ್ಕಳಿಗಾಗಿ ಇದು ಸುರಕ್ಷಿತವಾಗಿಲ್ಲ. ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಾಗಲಿ ಯಾರ ಅನುಮತಿಯೂ ಇಲ್ಲ.

ಸರ್ಕಾರದ ಉಚಿತ ಬಸ್ ಸೇವೆಯಿಂದ ರಿಕ್ಷಾ ಚಾಲಕರು ಸತ್ತ ಹೆಣಗಳಂತಾಗಿರುವಾಗ ಈಗ ರ್ಯಾಪಿಡೋ ಅಗತ್ಯತೆ ಬೆಳಗಾವಿಗಿಲ್ಲ. ಮಹಿಳೆಯರಿಗೆ ಇದು ಸುರಕ್ಷಿತವಾದುದ್ದಲ್ಲ. ಬೇರೆ ರಾಜ್ಯದ ಪಾಸಿಂಗ್ ಇರುವ ದ್ವಿಚಕ್ರ ವಾಹನಗಳನ್ನು ರ್ಯಾಪಿಡೋಗಾಗಿ ಬಳಸಲಾಗುತ್ತಿದೆ. ಏನಾದರೂ ಹೆಚ್ಚು ಕಡಿಮೆಯಾದರೇ ಯಾರೂ ಜವಾಬ್ದಾರರು. ಮೊದಲೇ ಸರ್ಕಾರ ಶಕ್ತಿ ಯೋಜನೆಯ ಹಗ್ಗವನ್ನು ರಿಕ್ಷಾ ಚಾಲಕರ ಕೊರಳಿಗೆ ಕುಣಿಕೆಯಾಗಿ ಹಾಕಿದೆ. ಮೂರು ತಿಂಗಳ ಸ್ಥಗಿತಿಯನ್ನು ನ್ಯಾಯಾಲಯ ನೀಡಿದೆ. ಆದರೂ ಅನುಮತಿಯನ್ನು ಉಲ್ಲಂಘಿಸಿ ರ್ಯಾಪಿಡೋದವರು ರಾಮದೇವ್’ದಿಂದ ಹಿಂಡಲಗಾಗೆ ಕೇವಲ 40 ರೂಪಾಯಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬೆಳಗಾವಿಯಲ್ಲಿ ರ್ಯಾಪಿಡೋ ಸೇವೆ ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ. ಬೆಳಗಾವಿಯ ದಕ್ಷಿಣ ಪೊಲೀಸ್ ಸಂಚಾರಿ ಠಾಣೆಗೆ ಆಟೋಚಾಲಕರನ್ನು ಕರೆದೊಯ್ದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button