ಹುಬ್ಬಳ್ಳಿ

ದೆಹಲಿ ಚುನಾವಣೆ ಬಗ್ಗೆ ಸಚಿವ ಲಾಡ್ ಭರವಸೆ: ಆರ್ಥಿಕ ದಿವಾಳಿತನಕ್ಕೆ ಕೇಂದ್ರ ಸರ್ಕಾರ ಕಾರಣ..!

ಹುಬ್ಬಳ್ಳಿ: ಬಿಜೆಪಿ ಒಳೋಳಗೆ ಮೋದಿ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ. ಮೋದಿ ವಿರುದ್ಧ ಮಾತನಾಡೋಕೆ ಯಾರಿಗೂ ಧೈರ್ಯ ಇಲ್ಲಾ. ರಾಮುಲು ಬಂದ್ರೆ ನಾನು ವ್ಯಯಕ್ತಿಕವಾಗಿ ಸ್ವಾಗತ ಮಾಡ್ತೇನೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದರು. ಗ್ಯಾರಂಟಿಯಿಂದ ಶಾಸಕರಿಗೆ ಅನುದಾನ ಇಲ್ಲಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಶಾಸಕರು ಈ ರೀತಿ ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಬರುವ ಅನುದಾನ ಬರ್ತಿದೆ. ಹೆಚ್ಚಿನ ಅನುದಾನ ಕೊಟ್ಟಿಲ್ಲ ಅಷ್ಟೇ. ಬಿ.ಆರ್.ಪಾಟೀಲ್ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅವರನ್ನೇ ಕೇಳಿ. ಸೂರ್ಯ ಚಂದ್ರ ಇರುವವರಿಗೆ ಅನುದಾನ ಕೊರತೆ ಇರುತ್ತದೆ.
ಬೆಡ್ತಿ ನಾಲೆ, ಹುಲಿ ಕೋಟಿ ಸೇರಿ ಹಲವು ಕಾಮಗಾರಿಗೆ ಅನುದಾನ ಕೊಟ್ಟಿದ್ದೇವೆ ಎಂದರು.

ರಾಜ್ಯ ಬಜೆಟ್ ವಿಚಾರಕ್ಕೆ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಜೆಟ್ ಮಾಡ್ತಾ ಇದ್ದಾರೆ, ಎಲ್ಲಾ ಇಲಾಖೆ ಅವರನ್ನ ಕರೀತಾ ಇದ್ದಾರೆ. ಎಲ್ಲಾ ಸಚಿವರಿಗೂ ಅವಕಾಶ ಕೊಡ್ತಾ ಇದ್ದಾರೆ ಎಂದ ಅವರು ಹೇಳಿದರು.

ದೆಹಲಿ ಚುನಾವಣೆ ಬಗ್ಗೆ ಸಚಿವ ಲಾಡ್ ಭರವಸೆ: ಆರ್ಥಿಕ ದಿವಾಳಿತನಕ್ಕೆ ಕೇಂದ್ರ ಸರ್ಕಾರ ಕಾರಣ..!

ದೆಹಲಿ ಚುನಾವಣೆ ವಿಚಾರದಲ್ಲಿ ಸತ್ಯ ಹೇಳಬೇಕಾಗುತ್ತೆ, ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಗೆಲ್ಲುತ್ತದೆ. ಆಪ್ ಪಕ್ಷ ಮೊದಲು, ಸೆಕೆಂಡು ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನು ಇನ್ನು ದೇಶದ ಜನ ಅರ್ಥ ಮಾಡ್ಕೊಂಡಿಲ್ಲ. ಫಿಲೋಸೋಫಿ ಜನರಿಗೆ ಮುಟ್ಟುವ ಕೆಲಸ ನಾವು ಮಾಡ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಬಹಳ ಚನ್ನಾಗಿ ಮಾತಾಡಿದ್ದಾರೆ. ಆದ್ರೆ ಅದನ್ನು ತೋರಿಸಲ್ಲ, ಅದರ ಬಗ್ಗೆ ಎಲ್ಲೂ ಚರ್ಚೆ ಇಲ್ಲಾ. ಬಿಜೆಪಿ ಅವರ ದೇಶದಲ್ಲಿ ಎಐ ಯಾವ ಲೆವೆಲ್ ನಲ್ಲಿದ್ದೇವೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗಲ್ಲ, 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡಿದೆ. ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸಿತ ಇದೆ ಎಂದರು.

ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು.70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು 10 ವರ್ಷದಲ್ಲಿ ಆಗಿದೆ. ಪ್ರಧಾನ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೋರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲ್ಲರಿಗಿಂತ ದೊಡ್ಡ ಸಾಧನೆ ಆಲ್ವಾ ಇದು..? ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಥೈಲ್ಯಾಂಡ್ ಗೆ ವೀಸಾ ಫ್ರಿ ಅಂದ್ರೆ ಪವರ ಫುಲ್ ಏನ್ರಿ?
ಪವರ ಫುಲ್ ಇದ್ರೆ ಡಾಲರ್ ಯಾಕೆ ಬೀಳ್ತಾ ಇದೆ, ಕೇಳಿ ಅವರನ್ನು ಬಿಜೆಪಿ ಹಾಗೂ ಮೋದಿ ಅವರ ಪಬ್ಲಿಸ್ ಸಿಟಿ ತಗೊಂಡು ದೇಶ ಹಾಳು ಆಗ್ತಿದೆ. ನಮ್ಮ ದೇಶದ ಸಾಲಕ್ಕಿಂತ 20% ಬಡ್ಡಿ ಕಟ್ಟುತ್ತಾ ಇದ್ದೇವೆ
ಬೆಳಗ್ಗೆ ಎದ್ದರೇ ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡ್ತಾರೆ. ನಾವು ತಲೆ ಕೂದಲು ಎಷ್ಟಿವೆ ಅಷ್ಟು ದೇವಸ್ಥಾನಗಳನ್ನ ಕಟ್ಟಿದ್ದೇವೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button