ಬೆಳಗಾವಿ
ಬೆಟ್ಟಿಂಗ್ ಅಡ್ಡೆ ಮೇಲೆ ಬೆಳಗಾವಿ ಸಿಇಎನ್ ಠಾಣೆ ಪೊಲೀಸರ ದಾಳಿ.

ಬೆಳಗಾವಿಯಲ್ಲಿ ಇತ್ತಿಚೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿ ನಡೆದಿದೆ. ಸಿಇಎನ್ ಪೊಲೀರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಪರಾರಿ ಆರೋಪಿಗಾಗಿ ಬಲೆ ಬಿಸಿದ್ದಾರೆ.
ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್’ನಲ್ಲಿ ತೊಡಗಿರುವವರಿಗೆ ಸಿ.ಇ.ಎನ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಸಿಇಎನ್ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ನಗರದ ಸಿಂಧಿ ಕಾಲನಿಯಲ್ಲಿರುವ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಪರಾರಿ ಬುಕ್ಕಿಗಾಗಿ ಬಲೆಯನ್ನು ಬಿಸಿದ್ದಾರೆ. ದಾಳಿಯ ವೇಳೆ 12 ಐಫೋನ್, 13 ಬೇಸಿಕ್ ಹ್ಯಾಂಡ್ ಸೆಟ್, ಸ್ಮಾರ್ಟ್ಟಿವಿ 2 ಲಕ್ಷ ನಗದು ಜಪ್ತಿ ಮಾಡಲಾಗಿದೆ.