ಬೆಳಗಾವಿರಾಜಕೀಯರಾಜ್ಯ

ಬಿಜೆಪಿಗರ ಗೊಡ್ಡು ಬೆದರಿಕೆ – ಅಪಪ್ರಚಾರಕ್ಕೆ ಹೆದರುವವರು ನಾವಲ್ಲ; ಬೆಳಗಾವಿಯಲ್ಲಿ ಸಿಎಂ ಸಿದ್ಧರಾಮಯ್ಯ.

ದೇಶದಲ್ಲಿ ಎಲ್ಲದರ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ನಡೆಸುವ ಬಿಜೆಪಿಗರಿಗೆ ಮಾನ ಮರ್ಯಾದೆಯೇ ಇಲ್ಲ. ಪೆಹಲ್’ಗಾಮ್’ನಲ್ಲಿ ಸುರಕ್ಷತೆಯ ವೈಫಲ್ಯವನ್ನು ಪ್ರಶ್ನಿಸಿದಾಗ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗರ ಗೊಡ್ಡು ಬೆದರಿಕೆ, ಅಪಪ್ರಚಾರಕ್ಕೆ ಹೆದರುವವರು ನಾವಲ್ಲ ಎಂದು ಸಿಎಂ ಸಿದ್ಧರಾಮಯ್ಯ ಬೆಳಗಾವಿಯಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಸಂವಿಧಾನ ರಕ್ಷಿಸಿ ದೇಶ ಉಳಿಸಿ ಘೋಷವಾಕ್ಯದೊಂದಿಗೆ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಇಂದು ಬೆಳಗಾವಿಯ ಸಿ.ಪಿಎಡ್. ಮೈದಾನದಲ್ಲಿ ರಾಜ್ಯ ಕಾಂಗ್ರೆಸ’ನ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಯಲಾಯಿತು. ಖಾಲಿ ಸಿಲಿಂಡರ್’ಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿನೂತನವಾಗಿ ಸಮಾವೇಶವನ್ನು ಉದ್ಘಾಟಿಸಿಲಾಯಿತು.

ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು, ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಜನಾಕ್ರೋಶ ಯಾತ್ರೆಯನ್ನು ಮಾಡುತ್ತಿದ್ದಾರೆ. ನಾಡಿನ ಜನರಿಗೆ ಟೋಪಿ ಹಾಕುತ್ತಿರುವವ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಛಿದ್ರ ಮಾಡುತ್ತಿದೆ. ಕಚ್ಚಾ ತೈಲ ಬೆಲೆ ಜಾಗತೀಕ ಮಟ್ಟದಲ್ಲಿ ಕಡಿಮೆಯಾಗಿದೆ. ಬಿಜೆಪಿಗೆ ಮಾನ ಮರ್ಯಾದೆ ಕಿಂಚಿತ್ತೂ ಇದ್ರೇ, ಜನಾಕ್ರೋಶ ಹಮ್ಮಿಕೊಳ್ಳುವ ನೈತಿಕ ಹಕ್ಕು ಇಲ್ಲ. ಸಿದ್ಧರಾಮಯ್ಯ ಸರ್ಕಾರದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುವುದು ಸತ್ಯಕ್ಕೆ ದೂರ ಎಂದರು. ಬಿಜೆಪಿ ಮತ್ತು ಆರ್.ಎಸ್.ಎಸ್.ನವರು ಎಲ್ಲೆಡೆ ಶಾಂತಿ ಕದಡಿ, ಬೆಂಕಿ ಹಚ್ಚುವ ಮತ್ತು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಾರೆ. ನಾವು ಬಿಜೆಪಿಗರ ಗೊಡ್ಡು ಪ್ರಯತ್ನಗಳಿಗೆ ಹೆದರುವುದಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು ಉಗ್ರರು ದಾಳಿ ನಡೆಸಿದಾಗ ಸುರಕ್ಷತೆ ವೈಫಲ್ಯದ ಕುರಿತು ಪ್ರಶ್ನಿಸಿದರೇ, ಸಿದ್ಧರಾಮಯ್ಯ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಡಿ ಎಂದಿದ್ದಾರೆಂದು ಅಪ್ರಚಾರ ಮಾಡುತ್ತಾರೆ. ಭಯೋತ್ಪಾದಕರ ವಿರುದ್ದ ಸಮರಕ್ಕೆ ನಾವು ಸದಾಸಿದ್ಧರಾಗಿದ್ದೇವೆ. ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್.ಎಸ್.ಎಸ್. ಮತ್ತು ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಧ್ವಜವನ್ನ ಹಾರಿಸಿರಲಿಲ್ಲ. ದಿವಾಳಿಯಾಗಿರುವ ಸರ್ಕಾರ 80 ಸಾವಿರ ಕೋಟಿ ಗ್ಯಾರಂಟಿ ಖರ್ಚು ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದರು. ರಾಜ್ಯದಿಂದ 4 ವರೆ ಲಕ್ಷ ಕೋಟಿ ಜಿ.ಎಸ್.ಟಿ ಹಣ ಸಂಗ್ರಹಿಸಿದ ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ನೀಡಲಾಗುತ್ತಿದೆ. ನಿಮ್ಮ ಪ್ರತಿಭಟನೆ, ಗೊಡ್ಡು, ಹೆದರುವವನಲ್ಲ ಈ ಸಿದ್ಧರಾಮಯ್ಯ ಹೆದರುವುದಿಲ್ಲ. ನಿಮ್ಮನ್ನು ಮೆಟ್ಟಿ ನಿಲ್ಲುವುದೇ ಕಾಂಗ್ರೆಸ್ ಪಕ್ಷದ ಧ್ಯೆಯ. ಸಂವಿಧಾನ ರಕ್ಷಿಸಿದರೇ ಅದು ನಮ್ಮ ರಕ್ಷಿಸುತ್ತದೆ ಎಂದರು.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆದಾಯ ಪಾತಳಕ್ಕೆ – ಬೆಲೆ ಏರಿಕೆ ಗಗನಕ್ಕೆ ಹಿನ್ನೆಲೆ, ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ರೈತರ ಸಹಾಯಕ್ಕೆ ಹಾಲಿಗೆ 4 ರೂಪಾಯಿ ಏರಿಕೆ ಮಾಡಲಾಗಿದೆ. ಆದರೇ ಬಿಜೆಪಿ ರೈತ ವಿರೋಧಿ ಪ್ರತಿಭಟನೆಯನ್ನು ನಡೆಸಿದೆ. ನಿಮ್ಮ ಆಕ್ರೋಶ ಕೇಂದ್ರದ ಬಿಜೆಪಿ ಸರ್ಕಾರದ ಮೇಲಿರಬೇಕು. ರಾಜ್ಯದಲ್ಲಿ ಎಲ್ಲ ಇಲಾಖೆಗಳಿಂದ ಅಭಿವೃದ್ಧಿ ನಿರಂತರವಾಗಿ ಮಾಡಲಾಗುತ್ತಿದೆ. ಬಿಜೆಪಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಸಂವಿಧಾನ ರಕ್ಷಣೆಯ ಅತ್ಯಂತ ಅವಶ್ಯಕತೆಯಿದೆ. ಸರ್ವರಿಗೂ ಸಮಬಾಳು ನೀತಿಯಡಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಇಡೀ ವಿಶ್ವದ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದಾಗುತ್ತಿದ್ದಾರೆ. ಬಿಜೆಪಿ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದೆ. ಆದರೇ, ಕಾಂಗ್ರೆಸ್ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಅವರು ನಮ್ಮ ಮುಂದೆ ಈಗ 2 ಮಾಡೆಲ್’ಗಳಿವೆ. ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾಡೆಲ್. ಇನ್ನೊಂದು ಬಿಜೆಪಿಯ ಲೂಟಿ ಮತ್ತು ದರ ಏರಿಕೆ. ಇನ್ನು ತೈಲ ಬೆಲೆಯನ್ನು ಕೂಡ ಹೆಚ್ಚಿಸಿದೆ. 4500 ಕೋಟಿಯನ್ನು ಹೆಚ್ಚಿಸಿದೆ. ಅಲ್ಲದೇ ಟೋಲ್ ದರವನ್ನು ಕೂಡ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ 53 ಸಾವಿರ ಕೋಟಿ ಜನರ ಖಾತೆಗೆ ಜಮೆ ಮಾಡುತ್ತಿದೆ. ಬಿಜೆಪಿ ಸರ್ಕಾರ 5500 ಕೋಟಿ ಜನರ ಜೇಬಿನಿಂದ ತೆಗೆಯುತ್ತಿದೆ. ಜನರು ಇದಕ್ಕೆ ತಕ್ಕ ಉತ್ತರ ಕೊಡಬೇಕಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ರಾಜ್ಯ ಕಾಂಗ್ರೆಸ್ ಯಶಸ್ವಿಯಾಗಿ 2 ವರ್ಷದಿಂದ ಸರ್ಕಾರ ನಡೆಸಿ, ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೇ, ಬಿಜೆಪಿ ಇದರ ಅಪಪ್ರಚಾರವನ್ನು ಮಾಡುತ್ತಿದೆ. ಕೇಂದ್ರ ಬೆಲೆ ಏರಿಕೆಯಿಂದ ದೇಶದ ಜನರಿಗೆ ಹೊರೆಯಾಗಿದ್ದು, ಇದಕ್ಕೆ ಪಿಎಂ ಮೋದಿ ಅವರ ಹೊಣೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದಿದ್ದು, 80 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರಿಗೆ ನೀಡಿ, ಅವರ ಬದುಕನ್ನು ಹಸನಾಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜನರ ವಿಶ್ವಾಸವನ್ನು ಗಳಿಸಿ ಜನಾಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದಿದೆ. ಕೊಟ್ಟ ಭಾಷೆಯನ್ನು ಉಳಿಸಿಕೊಂಡು, 5 ಗ್ಯಾರಂಟಿಗಳನ್ನು ನೀಡಲಾಗಿದೆ. ಆದರೇ ಬಿಜೆಪಿಗರು ತಮ್ಮಲ್ಲಿರುವ ಒಳಜಗಳಕ್ಕೆ ತೆಪೆ ಹಚ್ಚಲು ಕುರ್ಚಿ ಉಳಿಸಿಕೊಳ್ಳಲು ಜನಾಕ್ರೋಶವೆಂಬ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. ಸಂಪೂರ್ಣ ಕರ್ನಾಟಕದಲ್ಲಿ ಬಿಜೆಪಿಗೆ ಜನಾಕ್ರೋಶ ಯಾತ್ರೆ ಮಾಡಲು ಯಾವುದೇ ಮುಖವಿಲ್ಲ ಎಂದರು.

ವೇದಿಕೆಯ ಮೇಲೆ ಸಚಿವರಾದ ಕೆ.ಎಚ್. ಮುನಿಯಪ್ಪ, ಸಚಿವರಾದ ಎಚ್.ಕೆ. ಪಾಟೀಲ್. ಸಚಿವರಾದ ಆರ್.ಬಿ. ತಿಮ್ಮಾಪೂರ, ಎಂ.ಬಿ. ಪಾಟೀಲ್, ಶಾಸಕರಾದ ಆಸೀಫ್ ಸೇಠ್, ಲಕ್ಷ್ಮಣ ಸವದಿ, ಬಾಬಾಸಾಹೇಬ್ ಪಾಟೀಲ್. ರಾಜು ಕಾಗೆ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಯುವಾ ಕಾಂಗ್ರೆಸ್ ಅಧ್ಯಕ್ಷ ಪಿ.ವ್ಹಿ ಶ್ರೀನಿವಾಸ್, ಸಲೀಂ ಅಹಮದ್, ಜಿ.ಸಿ. ಚಂದ್ರಶೇಖರ್, ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೋರಕೆ, ಮಾಜಿ ಶಾಸಕರಾದ ಫಿರೋಜ್ ಸೇಠ್ , ಡಾ. ಅಂಜಲಿ ನಿಂಬಾಳ್ಕರ್, ವಿನಯ ನಾವಲಗಟ್ಟಿ, ಚನ್ನರಾಜ್ ಆಸೀಫ್, ಲಕ್ಷ್ಮಣರಾವ್ ಚಿಂಗಳೆ, ಗೋಪಿನಾಥ್ ಪಳನಿಯಪ್ಪನ್, ನಾಸೀರ್ ಹುಸೇನ್, ಇನ್ನುಳಿದವರು ಉಪಸ್ಥಿತರಿದ್ಧರು.

Related Articles

Leave a Reply

Your email address will not be published. Required fields are marked *

Back to top button