ಏ.30 ರಂದು ಅಕ್ಷಯ ತೃತೀಯ ದಿನದಂದು ಬಾಲ್ಯ ವಿವಾಹ ನಡೆಯದಂತೆ ಜಾಗೃತಿ

ಬಾಲ್ಯ ವಿವಾಹ ನಿಷೇಧ ಮಾಡಬೇಕೆಂದು ಕಾನೂನು ಇದ್ದರೂ ಬಾಲ್ಯ ವಿವಾಹ ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ. ಏ.30 ರಂದು ನಡೆಯುವ ಅಕ್ಷಯ ತೃತೀಯ ದಿನದಂದು ಬಾಲ್ಯ ವಿವಾಹ ನಡೆಯದಂತೆ ಜಾಗೃತಿ ವಹಿಸಬೇಕು ಎಂದು ಸ್ಪಂದನಾ ಸಂಸ್ಥೆಯ ನಿರ್ದಶಕಿ ಸುಶೀಲಾ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಲ್ಯ ವಿವಾಹ ಮಾಡಿರೆ ಪೋಸ್ಕೊ , ಜಾಮೀನುಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಬಹುದು. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಾಕಷ್ಟು ಸಾಮೂಹಿಕ ವಿವಾಹಗಳು ನಡೆಯುತ್ತಿವೆ. ಇದರಲ್ಲಿ ಒಂದು ಬಾಲ್ಯ ವಿವಾಹ ನಡೆಯದಂತೆ ಆಯೋಜಕರು ತಡೆಯಬೇಕು ಎಂದರು.ಕೇಂದ್ರ ಸರಕಾರದ ಸಹಯೋಗದಲ್ಲಿ ಚೈಲ್ಡ್ ಮ್ಯಾರೇಜ್ ಹಾಗೂ ಸ್ಪಂದನಾ ಸಂಸ್ಥೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟು ಬಾಲ್ಯ ವಿವಾಹ ತಡೆಯುವ ಕುರಿತು ಮಾಹಿತಿ ನೀಡುತ್ತೇವೆ ಎಂದರು.
ಸ್ಪಂದನಾ ಸಂಸ್ಥೆಯಿಂದ 2023-24ರಲ್ಲಿ ಸುಮಾರು 300ಕ್ಕೂ ಹೆಚ್ಚು ಬಾಲ್ಯ ವಿವಾಹವನ್ನು ತಡೆದಿದ್ದೇವೆ. ಬಾಲ್ಯ ವಿವಾಹ ಮುಕ್ತ ಭಾರತದ ಅಭಿಯಾನದಡಿಯಲ್ಲಿ ವಿವಾಹ ಸಮಯದಲ್ಲಿ ಯಾವುದೇ ಮಕ್ಕಳ ವಿವಾಹಗಳು ನಡೆಯದಂತೆ ಜಾಗೃತಿ ಅಭಿಯಾನ ಈಗಾಗಲೇ ಮಾಡಲಾಗಿದೆ. ಧರ್ಮ ಗುರುಗಳು ಮತ್ತು ನಮ್ಮ ಸಂಸ್ಥೆ ಒಟ್ಟಾಗಿ ಬಾಲ್ಯ ವಿವಾಹ ಗಂಭೀರವಾದ ಅಪರಾದ ಎಂದು ಘೋಷಣೆ ಮಾಡಲಾಗಿದೆ ಎಂದರು.
ಸ್ಪಂದನಾ ಸಂಸ್ಥೆಯ ಸಂಯೋಜಕರು, ಕರೇಪ್ಪ ಮಾದರ, ಶಿವಲೀಲಾ ಹಿರೇಮಠ, ಉಮಾ ಚನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.