
ಕಾಂಗ್ರೆಸನವರಿಗೆ ಪಾಕ್ ಜೊತೆ ಯುದ್ಧ ಮಾಡಿದ್ದು ಗೊತ್ತು. ಗೆದ್ದಿದ್ದು ಗೊತ್ತು. ಇವರ ತರಹ ಕರೆಯದೇ ಹೋಗಿ ಆತಿಥ್ಯ ಸ್ವೀಕರಿಸಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಪರೋಕ್ಷವಾಗಿ ಪಿಎಂ ವಿರುದ್ಧ ವಾಗ್ಧಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪೊಲೀಸ್ ಆಧಿಕಾರಿ ಮೇಲೆ ಸಿಎಂ ದರ್ಪ ವಿಚಾರವಾಗಿ ಮಾತನಾಡಿದ ಅವರು ಸಿಎಂ ಕೇವಲ ಕೈ ತೋರಿಸಿದ್ರೂ ಅಷ್ಟೇ. ಬಿಜೆಪಿಯವ್ರಿಗೆ ಮಾನ ಮರ್ಯಾದೆ ಇಲ್ಲ. ಅವ್ರು ಕಾರ್ಯಕ್ರಮಕ್ಕೂ ನಮ್ಮ ಕಾರ್ಯಕರ್ತರನ್ನ ಕಳಿಸಬೇಕಾ ನಾವು ? ಇದು ಸೌಜನ್ಯ ನಾ ? ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶನ ಮಾಡ್ತಾರೆ. ಕಾಂಗ್ರೆಸ ಕಾರ್ಯಕರ್ತರು ಪ್ರತಿಭಟಿಸುತ್ತಾರೆ ಆದರೇ ಇವರಷ್ಟು ಮಾನ ಮರ್ಯಾದೆ ಬಿಟ್ಟು ನಿಂತಿಲ್ಲ. ಲಾ & ಆರ್ಡರ್ ಪ್ರಾಬ್ಲಮ್ ಆಗುತ್ತೆ.
ಒಂದು ಕಾರ್ಯಕ್ರಮ ಮಾಡುವಾಗ ಕಾಮನ್ ಸೆನ್ಸ್ ಇರಬೇಕು. ಸಾವರ್ಜನಿಕ ಸಭೆ ಅದು, ಅದ್ರಲ್ಲಿ ದಿಕ್ಕಾರ ಕೂಗಿದ್ರೆ ದೊಡ್ಡ ಸಾಧನೆ ನಾ ಅದು ? ಬಿಜೆಪಿ ಸಾಧನೆ ಮೊದಲು ಲೆಕ್ಕ ಹಾಕ್ಲಿ,ಡಿಸೇಲ್,ಪೆಟ್ರೊಲ್ ದರ ಏನಾಗಿದೆ ಅಂತ. ಡಾಲರ್ ರೇಟ್ ಎಷ್ಟಿದೆ ಇವತ್ತು.ಇವರಿಗೆ(ಬಿಜೆಪಿ) ಆಡಳಿತ ಮಾಡಲಿಕ್ಕೆ ಆಗ್ತಿಲ್ಲ.ಡಿಸೇಲ್, ಪೆಟ್ರೋಲ್ ದರ ಏರಿದ್ರೆ, ಎಲ್ಲ ದರವೂ ಏರೇ ಏರುತ್ತೆ. ಸಾರಿಗೆ ಬೆಲೆ ಏರಿದ್ರೆ ಎಲ್ಲವೂ ಏರುತ್ತೆ,ಮೊದಲು ಈ ಎಲ್ಲಾ ಬೆಲೆ ಕಡಿಮೆ ಮಾಡ್ಲಿ ಇವ್ರು.ಸುಮ್ನೆ ಶೋ ಆಫ್ ಮಾಡೋಕೆ,ಜನರ ದಿಕ್ಕ ತಪ್ಪಿಸುವ ಕೆಲಸ ಮಾಡ್ತಾರೆ ಎಂದರು.
ಇನ್ನು ಪಿಎಂ ಮೋದಿ ಅವ್ರಿಗೆ ಗೌರವ ಇದೆಯಾ ? ಜಮ್ಮುವಿನಲ್ಲಿ ಅಮಾಯಕ ಜನರ ಶೂಟೌಟ್ ಆಗಿದೆ. ಅದರ ಬಗ್ಗೆ ಸರ್ವ ಪಕ್ಷ ಸಭೆ ಕರಿತಾರೆ. ಆದರೆ ಮೋದಿ ಎಲ್ಲಿಗೆ ಹೋಗ್ತಾರೆ. ? ಚುನಾವಣಾ ಪ್ರಚಾರಕ್ಕಾಗಿ ಬಿಹಾರಕ್ಕೆ ಹೋಗ್ತಾರೆ. ಮೋದಿ ಅವರಿಗೆ ದೇಶದ ಜನರು ಮುಖ್ಯವೋ ? ಚುನಾವಣೆ ಮುಖ್ಯವೋ?.ಇದರ ಬಗ್ಗೆ ಮಾತಾಡಲ್ಲ. ಇದರ ಬಗ್ಗೆ ಮಾತಾಡಲ್ಲ.ಭದ್ರತಾ ವೈಫಲ್ಯ ಮುಚ್ಚಿಕೊಳ್ಳೋಕೆ, ಬೇರೆಯವ್ರ ಮೇಲೆ ಗೂಬೆ ಕೂರುವ ಕೆಲಸ ಮಾಡ್ತಾರೆ. ಯಾಕೆ ಚೆಕ್ ಪೋಸ್ಟ್ ತೆಗಿಬೇಕಿತ್ತು. ನಿಮ್ಮ ಆಡಳಿತಕ್ಕೆ ವಿಪಕ್ಷ ಸಪೋರ್ಟ್ ಮಾಡಿತ್ತು. ಅದನ್ನೆಲ್ಲಾ ಮೀರಿ ಸಭೆ ಕರೆದು ಭಾಷಣ ಮಾಡೋಕೆ ಹೋಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವ್ರಿಗೆ ಯುದ್ಧ ಮಾಡಿದ್ದು ಗೊತ್ತು. ಯುದ್ಧದಲ್ಲಿ ಗೆದ್ದಿದ್ದು ಗೊತ್ತು. ಪಾಕಿಸ್ತಾನವನ್ನು ಸದೆ ಬಡೆದಿದ್ದು ಗೊತ್ತು. ಬಿಜೆಪಿಯವ್ರ ತರಹ ಕರಿಯದೇ ಬಿರ್ಯಾನಿ ತಿನ್ನೋಕೆ ಹೋಗಿಲ್ಲ ಎಂದರು.