ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಕಾರ್ಮಿಕರ ಅಕೌಂಟ್ ನಿಂದ ಹಣ ಕಟ್; ಏಜೆಂಟರಿಂದ ಅಪಪ್ರಚಾರ

ಕಳೆದ ನವೆಂಬರ 21ರಂದು ಬೆಳಗಾವಿಯ ಕಾರ್ಮಿಕ ಇಲಾಖೆಯ ಪ್ರಾದೆಶಿಕ ಕಛೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರದ ಕಾರ್ಯಕ್ರಮವನ್ನು ಉದ್ಗಾಟಿಸಲಾಗಿದ್ದು ಕಾರ್ಯಕ್ರಮಕ್ಕೆ ಮಾನ್ಯ ಕಾರ್ಮಿಕ ಆಯುಕ್ತರು ಹಾಗೂ ಉಪ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನೀರಿಕ್ಷಕರು ಚಾಲನೆ ನೀಡಿದ್ದರು ಈ ಕಾರ್ಯಕ್ರಮವು ಪ್ರಾರಂಭಗೊಂಡು ಸುಮಾರು ಒಂದು ತಿಂಗಳು ಕಳೆದಿದ್ದು ಈಗ ಪ್ರಗತಿಯಲ್ಲಿದೆ ಈ ಕಾರ್ಯಕ್ರಮವು ಸದರಿ ರಾಜ್ಯ ದಲ್ಲಿರುವ ಎಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ಮಾನ್ಯ ಸಚಿವ ಸಂತೋಷ ಲಾಡ್ ರವರು 5/1/2025ರಂದು ನಡೆದ ಕಾರ್ಯಕ್ರಮ ಒಂದರಲ್ಲಿ ಹೆಳಿದ್ದು, ಮುಂದೆ ಇದೆ ರೀತಿಯ ಮೊಬೈಲ್ ಮೆಡಿಕಲ್ ಯುನಿಟ್ ಮೂಲಕ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಭಾರತದಲ್ಲಿ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ ಎಂದು ದೂರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿಯಿಂದ ಪ್ರಾರಂಭಿಸಲಾದ ಈ ಯೋಜನೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಬೈಲಹೊಂಗಲ ಮತ್ತು ರಾಮದುರ್ಗ,ಸೌದತ್ತಿಯಲ್ಲಿ ತಪ್ಪು ಮಾಹಿತಿಯನ್ನು ಹರಿಬಿಡುತ್ತಿರುವ ಮೂಲಕ ಕಾರ್ಮಿಕರಲ್ಲಿ ಆತಂಕ ಮೂಡಿಸುವ ಹುನ್ನಾರ ನಡೆದಿರುವುದು ವಿಪರ್ಯಾಸದ ಸಂಗತಿ.
“ಉಚಿತ ಆರೋಗ್ಯ ತಪಾಸಣೆ ನಡೆಯುವ ಸ್ಥಳಕ್ಕೆ ಕಾರ್ಮಿಕರು ಹೋಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಕಾರ್ಮಿಕರ ಅಕೌಂಟ್ ನಿಂದ ಹಣ ಕಟ್ ಮಾಡಿಕೊಳ್ಳಲಾಗುತ್ತದೆ” ಎಂಬ ವದಂತಿಗಳನ್ನು ಹಬ್ಬಿಸುತ್ತಿರುವುದು ಕಂಡುಬಂದಿದೆ. ಇದರಲ್ಲಿ ಕಾರ್ಮಿಕ ಸಂಘಟಣೆ ಮುಖಂಡರು ಮತ್ತು ಎಜಂಟರುಗಳು ಈ ರೀತಿಯಾಗಿ ಮಾಡುತಿರುವುವ ಬಗ್ಗೆಯು ಮಾಹಿತಿಯಿದೆ.
ಸರಕಾರದ ಈ ಉತ್ತಮ ಸೇವೆಯಿಂದ ಮುಂದೆ ಕಾರ್ಮಿಕರು ಆರೋಗ್ಯವಂತರಾಗುವ ಈ ಯೋಜನೆಯನ್ನು ಈ ರೀತಿ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಮಾಹಿತಿಯನ್ನು ಪಡೆದು ಅವರನ್ನು ಶಿಕ್ಷಿಸಬೆಕಿದ್ದು ಸದರಿ ಇಲಾಖೆಯಲ್ಲೆ ಕೆಲಸಮಾಡಿ ಅವರಿಗೆ ಮೋಸ ಮಾಡುತ್ತಿರುವ ಇಂತಹ ಏಜಂಟರುಗಳನ್ನು ಇಲಾಖೆಯಿಂದಲೆ ದೂರದಲ್ಲಿಟ್ಟು ಕಾರ್ಮಿಕರಿಗೆ ನ್ಯಾಯ ಸಿಗುವಂತಾಗಬೇಕಿದೆ ಇನ್ನಾದರು ಕಾರ್ಮಿಕ ಇಲಾಖೆ ಇದರ ಬಗ್ಗೆ ಸರಿಯಾದ ತನಿಕೆ ನಡೆಸಿ ಇದು ತಪ್ಪು ಮಾಹಿತಿ ಎಂದು ಕಾರ್ಮಿಕರಿಗೆ ಹೇಳಿ ಅವರ ಆತಂಕವನ್ನು ದೂರಮಾಡಿ ಕಾರ್ಮಿಕರು ಈ ಯೋಜನೆಯ ಸದುಪಯೋಗ ಮಾಡಿಸಿಕೊಳ್ಳಲು ನೆರವಾಗಬೇಕಿದೆ